=> UNIVERSAL Tr = LIBRARY [ಎ = ಯಿ 2

| ಇಂ ದು

Ch ಲಿ

>C LL AdVddl | i 7 5೬3/೧ «EF

SOT TOOT OEY DT TN TU UL TUE LT OE TIE

ಸರೋಜಿನಿದೇವಿ

PT TT PE TTT PTET

: ಎಚ್‌. ಎಲ್‌. ನಾಗೇಗೌಡ

51111811111 81111811111 ॥81111|11181111111181111111111 8111111111811111(1111$(11|||||1 A OT UY

ಷ್ಟ ವಾ ಡೆ ಜ್‌ ಷ್ಠ ಕಾ = 5 = ಘೆ ಕಾ ಷ್ರ = ಕ್ತ ` ಪ್ರ = =

ಸರೋಜಯದೀೇಖ

ಎಚ್‌. ಎಲ್‌. ನಾಗೇಗೌಡ, ಬಿ.ಎಸ್‌ಸಿ, ಎಲ್‌ಎಲ್‌. ಬಿ,

ನೊದಲನಷಹಿ ಇುದ್ರಿಣ ೧೯೫೯

ಎಲ್ಲ ಹಕ್ಕುಗಳೂ ಗ್ರಂಥಕರ್ತರಿಗೆ ಸೇರಿನೆ

ಮುದ್ರಕರು; ಶೀ ಶಕ ಎಲೆಕ್ಕಿಕ್‌ ಪೆಸ್‌ ಇತ್ರ ಕೃಸ್ಥಮೂರ್ತಿಪುರಂ, ಮೈಸೂರು.

ಮು ನ್ನುಡಿ

ನಾನು ಮೈಸೂರಿಗೆ ಬಂದಾಗಲೆಲ್ಲ ನನ್ನ ಜೀವನಲ್ಲಿ ಏನಾದರೊಂದು ಮಹತ್ತರವಾದ ಘಟನೆ ಜರುಗುತ್ತಾ ಬಂದಿದೆ. ಮೊಟ್ಟಮೊದಲಿಗೆ ಹದಿ ನೇಳು ವರ್ಷಗಳ ಹಿಂದೆ ನಾನು ನನ್ನ ಸರ್ಕಾರಿ ನೌಕರಿಯ ಜೀವನವನ್ನು ಮೈಸೂರಿನಲ್ಲಿ ಆರಂಭಿಸಿದಾಗ ಅಕಸ್ಮಾತ್ತಾಗಿ ನನ್ನ ಕಣ್ಣಿಗೆ ಬಿದ್ದ ಸರ್‌ ವಾಲ್ಬರ್‌ ಸ್ಟಾಟ್‌ ಕನಿಯ ಕೆನಿಲ್‌ವರ್ತ್‌' ಎಂಬ ಗ್ರಂಥ ಕನ್ನಡಕ್ಕೆ ಅನುವಾದವಾಯಿತು. ಆದರೆ ಅದು ಬೆಳಕು ಕಾಣದೆ ನನ್ನೊಡನೆ ಹನ್ನೆರಡು ವರ್ಷಗಳು ಅಲೆದಾಡಿದ ಮೇಲೆ ನಾನು ಪುನಃ ಮೈಸೂರಿಗೆ ಬಂದಾಗ ಬೆಳಕು ಕಂಡಿತು. ಅದನ್ನು ಓದಿದ ಸಹೃದಯರು ನಾಲ್ಫು ಮೆಚ್ಚೆಕೆಯ ಮಾತುಗಳನ್ನಾಡಿದರು. ಇದರಿಂದ ಉತ್ತೇಜಿತನಾದ ನಾನು " ಮಾರ್ಕೊ ಪೋಲೋ ಪ್ರವಾಸ ಕಥನ' ಎಂಬ ಪುಸ್ತಕವನ್ನು ಪ್ರಕಟಿಸಿದೆ. ಅದಾ ದದ್ದೂ ಮೈಸೂರಿನಲ್ಲಿಯೇ. ಪ್ರವಾಸ ಸಾಹಿತ್ಯಕ್ಕೆ ಕೈ ಹಾಕಿದ ನನಗೆ ಜೇನುತುಪ್ಪ ತುಂಬಿದ ಹುಟ್ಟಿ ಗಳೇ ಕೃಗೆ ಸಿಕ್ಕಂತಾಯಿತು. ಹುಟ್ಟಿ ಗಳನ್ನು ಹಿಂಡಿ" ಪ್ರವಾಸಿಗಳು ಕಂಡ ಭಾರತ' ಎಂಬ ಸಾವಿರಾರು ಪುಟಿಗಳ ಉದ್ದ ಂಥವನ್ನು ಸಿದ್ಧಪಡಿಸಿದೆ. ಗ್ರಂಥ ಮೈಸೂರು ವಿಶ್ವನಿದ್ಯಾ ನಿಲಯದ ಕೃಪೆಯಿಂದ ಇನ್ನೇನು ಪ್ರಕಟವಾಗುವುದರಲ್ಲಿದೆ. ಇದಾದನಂತರ ಹೆಲವಾರು ವರ್ಷಗಳು ಬೇರೆ ಕಡೆ ಅಲೆದಾಡಿ ಮತ್ತೊಮ್ಮೆ ಮೈಸೂರಿಗೆ ಬಂದೆ. ಈಗ " ಸರೋಜಿನಿದೇವಿ' ಎಂಬ ಗ್ರಂಥ ಹೊರಬೀಳುತ್ತಿದೆ. ಇದ ನ್ನೆಲ್ಲ ನೋಡಿದರೆ ಸರಸ್ವತಿಯ ತವರೂರಾದ ಮೈಸೂರು ನೌಕರಿಯ ಗಾಣದಲ್ಲಿ ಎತ್ತಿನಂತೆ ತಿರುಗುತ್ತಿರುವ ನನ್ನ ಮೇಲೂ ಅಲ್ಪಸ್ವಲ್ಪ ಕೃಪೆ ತೋರಿದಂತೆ ಕಾಣುತ್ತದೆ. ಕೃಪೆಯನ್ನು ಸಾರ್ಥಕ ಮಾಡಿಕೊಳ್ಳಲು ಹೆರಟು ಗ್ರಂಥವನ್ನು ಓದುಗರ ಮುಂದೆ ಇಡುತ್ತಿದ್ದೇನೆ.

ಸರ್ಕಾರಿ ನೌಕರಿಯಲ್ಲಿರುವವನಿಗೆ ಸಾಹಿತ್ಯಾಭಿರುಚಿ ಹುಟ್ಟುವುದು ಹುಟ್ಟಿದರೂ ಕಾಲ ದೊರೆಯುವುದು ದೊರೆತರೂ ಓದುವುದು ಬರೆಯು ವುದು ಕಷ್ಟ. ದೇವರ ದಯದಿಂದ ನನಗೆ ಅಷ್ಟಿಷ್ಟು ಸಾಹಿತ್ಯಾಭಿರುಚಿ ಇದೆ. ಕಾಲ ಅಲ್ಪ ಸ್ವಲ್ಪ... ಓದಿದರೂ ಓದಬಹುದು. ಆದರೆ ಬರೆಯಲು

Iv

ಬೇಕಾದ ಭಾಷೆ ಮಾತ್ರ ಸೊನ್ನೆ. ಸೊನ್ನೆ ಕೈಗೆ ಸಿಕ್ಕಿದರೆ ಸ್ವರ್ಗವನ್ನೇ ಸೃಷ್ಟಿ ಮಾಡಿಕೊಳ್ಳುವ ಕವಿಯೂ ನಾನಲ್ಲ ಕಳ್ಳ ನೂ ನಾನಲ್ಲ. ಬಹಳ ಅಂದರೆ ಅದನ್ನು ಇಂಗ್ಲೀಷಿನ ಮೂರು ಆಥವಾ ಆರು ಮಾಡಬಲ್ಲ ಸಾಮಾನ್ಯ ನಾನು. " ಮೂರಕ್ಕೆ ಇಳಿಯದ ಆರಕ್ಕೆ ಏರದ' ಅಲ್ಪ ಶಕ್ತಿಯನ್ನು ಉಪಯೋಗಿಸಿಕೊಂಡು ಸಿಕ್ಚಷ್ಟು ಕಾಲದಲ್ಲಿ ನನ್ನ ಕೃಲಾದು ದನ್ನು ಮಾಡಬೇಕೆಂಬುದೇ ನನ್ನ ಹಂಬಲ. ಹಂಬಲದ ಹರಿಣಾಮವೇ ಗ್ರಂಥ.

ಸರೋಜಿನಿದೇನಿಯ ಜೀವನಚರಿತ್ರೆಯನ್ನು ಬರೆಯಲು ಸೂಚನೆ ಕೊಟ್ಟವರು ನನ್ನ ಪ್ರಿಯಮಿತ್ರರಾದ ದೇ. ಜವರೇಗೌಡರು. ಸುಲಭವೆಂದು ಕೆಲಸಕ್ಕೆ ಕೈಹಾಕಿದ ನಾನು ಬರೆದು ಮುಗಿಸಬೇಕಾದರೆ ಬಹಳ ಸರದಾಡ ಬೇಕಾಯಿತು. ಇಡೀ ಭಾರತದಲ್ಲಿ ಸರೋಜಿನಿಯ ಪೂರ್ಣ ಜೀವನವನ್ನು ಸಮಗ್ರವಾಗಿ ಚಿತ್ರಿಸುವ ಗ್ರಂಥ ಯಾವ ಭಾಷೆಯಲ್ಲಿಯೂ ಇಲ್ಲ. ಆದಕಾರಣ ಹತ್ತಾರು ಗ್ರಂಥಗಳನ್ನು ಅವಲೋಕಿಸಿ, ನಾಲ್ದಾರು ಜನರಿಂದ ವಿಷೆಯ ಸಂಗ್ರಹಣಮಾಡಿ ಹಿಡಿದ ಕೆಲಸವನ್ನು ಸಾರ್ಥಕಮಾಡಿಕೊಳ್ಳ ಬೇಕಾಯಿತು. ನನ್ನ ಪರದಾಟವನ್ನು ಬರೆದರೇ ಒಂದು ಗ್ರಂಥವಾಗುತ್ತದೆ. ಅಂತೂ ಮಹಾಮಹಿಳೆಯ ಚಿತ್ರವನ್ನು ನನ್ನ ಕೈಲಾದಮಟ್ಟಿಗೆ ಚಿತ್ರಿಸಿದ್ದೇನೆ. ನನ್ನ ಕೆಲಸ ಸಮರ್ಪಕವಾಗಿದೆಯೆಂದು ನಾ ಹೇಳಿಕೊಳ್ಳ ಲಾರೆ, ನನಗಿಂತ ಶಕ್ತರು ಕೆಲಸ ಮಾಡಬೇಕಾಗಿತ್ತೋ ಏನೋ, ಆದರೆ ಯಾರೂ ಮಾಡದೇ ಹೋದರೂ ಹೋಗಬಹುದು. ಮನುಷ್ಯನಿಗೆ ಮರವು ಹೆಚ್ಚು. ಮರವಿನಲ್ಲಿ ಸರೋಜಿನಿಯಂತಹ ವ್ಯಕ್ತಿ ಕಾಣೆಯಾಗಬಾರದು. ಸರೋಜಿನಿದೇವಿಯ ಮೇಲೆ ಸರಿಯಾದ ಗ್ರಂಥ ಕನ್ನಡದಲ್ಲಿಲ್ಲ ಅದನ್ನು ಮನಗಂಡು ನ್ಯೂನತೆ ಗಳಿದ್ದರೂ ಚಿಂತೆಯಿಲ್ಲ ನಿಷಯ ಸಂಗ್ರಹಣೆ ಮಾಡಿದ್ದರೆ ನಾಳ ಮತ್ತೂ ಬ್ಬರು ಕೆಲಸವನ್ನು ಸಮರ್ಸಕವಾಗಿ ನಿರ್ವಹಿಸಬಲ್ಲರೆಂದು ಭಾವಿಸಿ ಹಿಡಿದ ಕೆಲಸನನ್ನು ಹಾಗೂ ಹೀಗೂ ಪೂರ್ತಿ ಮಾಡಿದೆ. ಇಷ್ಟು ಮಾತ್ರ ಹೇಳಬಲ್ಲೆ. ಇಡೀ ಭಾರತದ ಯಾನ ಭಾಷೆಯಲ್ಲಿಯೂ ಸರೋಜಿನಿಯ ಬಗ್ಗೆ ಇಷ್ಟು ನಿವರವಾದ, ಇಷ್ಟು ವ್ಯಾಪ್ತಿಯುಳ್ಳ ಗ್ರಂಥ ಇಲ್ಲವೇ ಇಲ್ಲ. ನನ್ನಿಂದ ಕೆಲಸ ಮಾಡಿಸಿದ್ದಕ್ಕಾಗಿ ನನ್ನ ಮಿತ್ರರಿಗೆ ನಾನು ಕೃತಜ್ಞ.

v

ಸಹೃದಯರು ಓದಿ ಒಪ್ಪಿದರೆ ಸಂತೋಷ. ತಪ್ಪು ಕಂಡರೆ ಅಸಂತೋಷ ವೇನಿಲ್ಲ ಏಕೆಂದರೆ ತಪ್ಪಿಲ್ಲದಂತೆ ಬರೆಯುವ ವೃತ್ತಿ ನನ್ನದಲ್ಲ.

ಗ್ರಂಥವನ್ನು Mo ಸ್ವಲ್ಪ ಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟಿ ರುನ ಶಕ್ತಿ ಎಲೆಕ್ಟ್ರಿಕ್‌ ಸ್ರೆಸ್ಸಿನ ರಾ. ನೆಂ. ಶಿ ಶ್ರೀಯವರಿಗೆ ನನ್ನ ವಂದನೆಗಳು.

ಮೈಸೂರು

ತಾ| ೧೪. ೧೧೯೫೯ ಎಚ್‌. ಎಲ್‌. ನಾಗೇಗೌಡ

ಕಾ ಧಾರಾ yy Ey DD ಸೆಶಕನೆ ಕಸೆ ಜರ ಶಠ

ಗಣ ಓಗಿ ಓವಿ

ಸರಿನಿಡಿ

ಬೇಕಾಗಿರುವುದು ಗಂಡಸಲ್ಲ ಹೆಂಗಸು ತಂದೆ-ತಾಯಿ

ಬಾಲ್ಕ ಮತ್ತು ವಿದ್ಯಾಭ್ಯಾಸ ವಿದೇಶಗಮನ

, ಶ್ರೀಮತಿ ನಾಯಿಡು

ಸರೋಜವರಳಿತು- ಕೋಗಿಲೆ ಹಾಡಿತು ನಿರಾಶೆಯಿಂದ ನೆಚ್ಚಿಗೆ

ಮಹಾತ್ಮನ ಪ್ರಥಮ ದರ್ಶನ

ತಂದೆ ಕೀರಿಕೊಂಡರು ಸರೋಜಿನಿಯಲ್ಲ ಭಾರತದ ನೀರನಾರಿ ರಾಷ್ಟ್ರದ ಅತ್ಯುನ್ನತ ಗೌರವ ಅಮೇರಿಕಾ ಆಫ್ರಿಕಾ ದೇಶಗಳಲ್ಲಿ ಭಾಗ್ಯನಿಧಾತನ ಹಿಂದೆ

ವರ್ಣಮಯ ವ್ಯಕ್ತಿ

ಶ್ರೀಕಂಠ

ಬಾ ಇಲ್ಲದ ಬಾಪು

ಸ್ವಾತಂತ್ರ್ಯ ಸಿದ್ಧಿ

ಗೌರ್ನರ್‌ ಅಲ್ಲ ಗೌರ್ನಸ್‌

ರಾಷ್ಟ್ರಕ್ಕೆ ಕೊನೆಯ ವಂದನೆ ಶ್ರದ್ಧಾಂಜಲಿ

ಚಿತ್ರ ಗಳು

ಸರೋಜಿನಿದೇವಿ

ಅಫೋರನಾಥ ಚಟ್ಟೋಪಾಧ್ಯಾಯ ವರದಸುಂದರೀದೇವಿ

« ಹದಿನಾರು ವರ್ಷದ ಮಗು?

ದಂಡಿ ಸತ್ಯಾಗ್ರ ಹದಲ್ಲಿ ದಂಡನಾಯಕೆಯಾಗಿ ಕೊನೆಯ ವಂದನೆ

ಸರೋಜಿನಿದೇವಿಯ ಹಸ್ತಾಕ್ಷರ

೧. ಬೇಕಾಗಿರುವುದು ಗಂಡಸಲ್ಲ, ಹೆಂಗಸು

ಶ್ರಿೀರಾನುಕೃಷ್ಣ ಪರಮಹಂಸರ ಪಟ್ಟಿತಿಸ್ಕರಾದ ಸ್ವಾಮಿ ವಿವೇಕಾ ನಂದರು ಕ್ರ. ಶ. ೧೮೯೭ರಲ್ಲಿ ಸೋದರಿ ನಿನೇದಿತಾ ಎಂಬ ನಾನುದಿಂದ ಪ್ರಸಿದ ರಾದ ಅವರ ಶಿಷ್ಯ ಮಿಸ್‌ ಮಾರ್ಗರೆಟ್‌ ನೋಬಲ್‌ ಎಂಬ ಇಂಗ್ಲಿಷ್‌ ಮಹಿಳೆಗೆ ರೀತಿ ಕಾಗದ ಬರೆದರು; “ನಾನು ಮನಬಿಚ್ಛೆ ನಿನಗೆ ಹೇಳು ತ್ಲೇನೆ ನಿವೇದಿತಾ; ನಿನಗೆ ಭಾರತದಲ್ಲಿ ಭವ್ಯ ಭನಿಷ್ಯವಿದೆಯೆಂದು. ನಮಗಿಂದು ಬೇಕಾಗಿರುವುದು ಗಂಡಸಲ್ಲ ಹೆಂಗಸು. ಭಾರತೀಯರಿಗಾಗಿ ಅದರಲ್ಲಿಯೂ ಹೆಂಗಸರಿಗಾಗಿ ಕೆಲಸಮಾಡಬಲ್ಲ ನಿಜವಾದ ಸಿಂಹಿಣಿ ಭಾರತ ಕೈಂದು ಬೇಕಾಗಿದೆ. ಸದ್ಯದಲ್ಲಿ ಭಾರತ ಅಂಥ ಮಹಿಳೆಯರನ್ನು ಸೃಷ್ಟಿ ಮಾಡಲಾರದು. ಆದ್ದರಿಂದ ಅವರನ್ನು ಹೊರಗಡೆಯಿಂದ ಎರವು ತೆಗೆದು ಕೊಳ್ಳ ಬೇಕಾಗಿದೆ. ನಿದ್ಯೆ, ನಿಸ್ಪಸಟಿ ವರ್ತನೆ, ಸ್ವಚ್ಛತೆ, ಅಮರ ಪ್ರೇಮ, ನಿರ್ಧಾರಶಕ್ಕಿ ಇವೆಲ್ಲಕ್ಕಿಂತ ಹೆಚ್ಚಾಗಿ ಉನ್ನತ ಕುಲ ಇವು ನಿನ್ನಲ್ಲಿವೆ. ಇಂಥ ಸ್ತ್ರೀ ನಮಗಿಂದು ಬೇಕಾಗಿದೆ.”

ಆದರೆ ವಿನೇಕಾನಂದರು ಆಶಿಸಿದ ಸ್ತ್ರೀಯೊಬ್ಬಳ ಜನ್ಮ ಅಂದಿಗೆ ಭಾರತದಲ್ಲಿಯೇ ಹೆದಿನೆಂಟು ವರ್ಷಗಳ ಮುನ್ನವೇ ಆಗಿತ್ತು. ಭಾರತದ ಪುಣ್ಯದ ಪೂರ್ನದಿಗಂತದಲ್ಲಿ ನನ ದಿನಮಣಿಯೊಂದು ಮೂಡಿ ಆಗತಾನೇ ಮುಂಬೆಳಗು ಸೂಚಿಸುತ್ತಿತ್ತು. ಭಾರತಕ್ಕೆ ಬೇಕಾಗಿದ್ದುದು ಗಂಡಸಲ್ಲ, ಹೆಂಗಸು ಎಂದು ವಿನೇಕಾನಂದರು ಹಾರೈಸಿದ್ದಂತೆ ಅಂತಹ ಹೆಂಗಸೊಬ್ಬಳು ಜನ್ಮಧಾರಣೆ ಮಾಡಿದ್ದಳು. ಅವಳೇ ಭಾರತದ ಕೋಗಿಲೆಯೆಂದು, ಸುಪ್ರಸಿದ್ದ ವಾಗಿಕ್ತಿಯೆಂದು ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ನೀರರಮುಣಿ ಯೆಂದು ಹೆಸರಾದ ಸಿಂಹಿಣಿ ಸರೋಜಿನಿ. ೧೮೭೯ನೇ ಫೆಬ್ರವರಿ ಹದಿಮೂ ರನೇ ತಾರೀಕು ಆಕೆಯ ಜನ್ಮದ ಪುಣ್ಯದಿನವಾಯಿತು.

೨. ತಂದೆ-ತಾಯಿ

ಸರೋಜಿನಿಯ ತಂದೆತಾಯಿಯರ ಹೆಸರು ಅಘೋರನಾಥ ಚಟ್ಟೋ ಪಾಧ್ಯಾಯ ಮತ್ತು ವರದಸುಂದರೀದೇವಿ ಎಂದು. ತಂದೆತಾಯಿಯರ ಹೆಸರು ಕೇಳಿ ಸರೋಜಿನಿಯ ಜನ್ಮ ಬಂಗಾಳದಲ್ಲಿ ಆಗಿರಬೇಕೆಂದು ಯಾರಾ ದರೂ ಊಹಿಸಬಹುದು. ಆದರೆ ಆಕೆಯ ಜನ್ಮವಾದದ್ದು ಹೈದರಾಬಾದಿ ನಲ್ಲಿ. ಮುಸ್ಲಿಂ ಸಂಸ್ಕೃತಿಯ ಕೇಂದ್ರವಾದ ನೈಜಾಮರ ರಾಜ್ಯದಲ್ಲಿ. ಚಟ್ಟೋಪಾಧ್ಯಾಯರೇನೋ ಮೊದಲಿಗೆ ಬಂಗಾಳದವರೇ. ಬಂಗಾಳದ ಡೆಕ್ಕಾ ಜಿಲ್ಲೆಯ ಬ್ರಾಹ್ಮಣಗಾವ್‌ ಎಂಬ ಊರಿನವರು. ಅವರ ಮನೆತನದ ಹೆಸರು ಛಟರ್ಜಿ ಎಂದು. ಬ್ರಾಹೆ ಣಿಗಾವ್‌ ಈಗ ಪಾಕಿಸ್ಥಾ ನಕ್ಕೆ ಸೇರಿದ ಪೂರ್ವ ಬಂಗಾಳದಲ್ಲಿದೆ. ಛಟರ್ಟಿ ಮನೆತನ ನೂರಾರು ವರ್ಷಗಳ ಕಾಲದಿಂದಲೂ ಪಾಂಡಿತ್ಯಕ್ಕೆ ಹೆಸರಾದ ಮನೆತನ. ನೇದೋಪನಿಸ ಷತ್ತುಗಳಲ್ಲಿ ಅಗಾಧವಾದ ನಿದ್ವ ತ್ತು ಇತ್ತು. ಸಂಸ್ಕೃತದಲ್ಲಿ ವಿಶೇಷ ಜ್ಞಾ ನವಿತ್ತೆ ೦ದು ಹೇಳಬೇಕಾಗಿಲ್ಲ. ಕಲಿತಿದ್ದು ದನ್ನು ಅನ್ಯರಿಗೆ ಬೋಧಿಸುವ ಕೆಲಸ ವನ್ನು ಅವರ ಮನೆತನದವರು ಮಾಡುತ್ತಿದ್ದರು. ಹೀಗಾಗಿ ಇಡೀ ಮನೆತನಕ್ಕೆ. ಬಂಗಾಳದಲ್ಲಿ ಬಹಳ ಗೌರವವಿತ್ತು.

ಇಂತಹ ವಂಶದಲ್ಲಿ ಜನಿಸಿದ ಅಘೋರನಾಥರು ಪ್ರತಿಭಾವಂತರಾ ಗಿಯೇ ಜನಿಸಿದರೆಂದು ಹೇಳಬೇಕಾಗಿಲ್ಲ. ೧೮೫೧ರಲ್ಲಿ ಜನ್ಮತಾಳಿದ ಅವರು ಅವರ ತಂದೆಯ ನಾಲ್ಕು ಮಕ್ಕಳಲ್ಲಿ ಕೊನೆಯನರಾಗಿದ್ದರು. ತಂದೆಯಿಂದ ವೇದೋಪನಿಷತ್ತುಗಳ ಸಂಸ್ಕಾರದ ಜೊತೆಗೆ ಅನರು ಇಂಗ್ಲೀಷಿನ ಅಭ್ಯಾಸ ವನ್ನು ಮಾಡಿದರು. ಆಗ ನಿಕ್ಟೋರಿಯಾ ರಾಣಿ ಭಾರತದ ಚಕ್ರವೃರ್ತಿನಿ ಯಾಗಿದ್ದರು. ಯುಗದಲ್ಲಿ ಇಂಗ್ಲೀಷೇ ಸರ್ವಮಾನ್ಯವಾಗಿತ್ತು. ಅರ್ಧಂಬರ್ಧ ಇಂಗ್ಲಿಷ್‌ ಬರುತ್ತಿದ್ದ ಬಟ್ಲಿ ರಿಗಿದ್ದ ಮರ್ಯಾದೆ ಇಂಗ್ಲೀಷ್‌ ಕಲಿಯದ ನಮ್ಮ ಪಂಡಿತೋತ್ತಮರಿಗೆ ಇರುತ್ತಿರಲಿಲ್ಲ. ಆದ್ದರಿಂದ ಯಾರಾ ದರೂ ಮಾನ್ಯತೆ ಸಡೆಯಬೇಕಾಗಿದ್ದಲ್ಲಿ ಇಂಗ್ಲಿಷ ಕಲಿಯಲೇಬೇಕಾಗಿತ್ತು. ಅಘೋರನಾಥರು ಭಾಷೆಯನ್ನು ಕಲಿತರು. ಇಂಗಿ ಿ ಸನ್ನಲ್ಲದೆ ಅವರು ಪುರಾತನ ಭಾಷೆಗಳಾದ ಹೀಬ್ರು ಮತ್ತು ಗ್ರೀಕ್‌ ಭಾಷ ಸಗಳನ್ನೂ ಕಲಿತರು;

ಬ್‌

5

(ತ

ಸಾಕಾ 1

ಯಿ

ಸ.

(5

ಗೆ rs

Py ಗ,

if

pt

Most

i

ಸಸ ಬ್ಬ ಕೊ ಆಗಾಕ ಟ್‌ NS ಸಲ 4 aya, 10 ಗೆಳ ಗ, . 4 | ; 3 ; ಭ್ಯ Ue

1 ಜಟ ಟೂ

ಕ, ಗ,

MANE A} : ಬ್‌ ಯು ಬಯ I 1 ಸಿ

1

ಜ್ಯಾ ಷ್ನಷ್ಟಃ

ತಂದೆ-ತಾಯಿ |

ಆಧುನಿಕ ಭಾಸೆಗಳಾದ ಫೆ ್ರೈಂಚ್‌ ಮತ್ತು ಜರ್ಮನ್‌ ಭಾಷೆಗಳ ಅಧ್ಯಯನ ಮಾಡಿದರು. ಅವರಿಗೆ ಸದುವುಸಿಂಡಸ ಸಿಹಿ ತಿಂಡಿ ತಿನ್ನುವಷ್ಟು ಆಸೆ, ವಯಸ್ಸಾ ದಮೇಲಂತೂ ಒಂದೊಂದು ದಿನ ಒಂದೊಂದು ಹೊಸ ವಿಷಯ ಕಲಿಯದಿದ್ದರೆ ದಿನ ವ್ಯರ್ಥವೆಂದು ಅವರು ಭಾನಿಸುತ್ತಿದ್ದರು. ಗಂಟಿ ಗಂಟೆಗೂ ಮನುಸ್ಯ ತನ್ನ ಜ್ಞಾನವನ್ನು ಹೆಚ್ಚಿ ಸಿಕೊಳ್ಳದಿದ್ದರೆ ಅವನು ಪ್ರಾಣಿಗೆ ಸಮಾನವೆಂದು ಹೇಳುತ್ತಿದ್ದರು. ಓದುವುದರಲ್ಲಿ ಇಡೀ ತರಗತಿಗೆ ಅವರು ಮೊದಲನೆಯವರು. ದೊಡ್ಡ ವರಾದಮೇಲೂ ಅನರು ಯಾರಿಗೂ ಕಡಮೆ ಇರಲಿಲ್ಲವಂತೆ. ತಂದೆಯ ಬಗ್ಗೆ ಸರೋಜಿನಿ ಹೀಗೆ ಹೇಳಿಕೊಂಡಿ ದ್ದಾಳೆ: ನನಗೆ ತಿಳಿದಮಟ್ಟಿಗೆ ಇಡೀ ಭಾರತದಲ್ಲಿ ಅವರಷ್ಟು ಪಾಂಡಿತ್ಯ ವುಳ್ಳವರು ಯಾರೂ ಇರಲಿಲ್ಲ. ಹಾಗೆಯೇ ಅವರಷ್ಟು ಪ್ರೀತಿಪಾತ್ರರು ಯಾರೂ ಇರಲಿಲ್ಲವೆಂದೇ ನನ್ನ ಭಾವನೆ.”

ಅಘೋರನಾಥರು ಸಾಹಿತ್ಯಪಂಡಿತರಷ್ಟೇ ಅಲ್ಲ, ವಿಜ್ಞಾನದ ಉಪಾ ಸಕರೂ ಆಗಿದ್ದರು. ಅದರಲ್ಲಿಯೂ ರಸಾಯನ ಶಾಸ್ತ್ರದ ಬಗ್ಗೆ ಅವರಿಗೆ ಹೆಚ್ಚು ಮಮತೆ.

ಕಲ್ಪತ್ತಾ ಪ್ರೆ ಪೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಿದಾ ಖ್ಯಭ್ಯಾಸ ಸವನ್ನು ಮುಗಿಸಿಕೊಂಡ ಅವರು ಮುನ್ನೂ ಪ್‌ ಜೀ ಗಿ೮್‌ಕ್ರೈಸ್ಸ್‌ ವಿದ್ಯಾರ್ಥಿ ವೇತನವನ್ನು ಪಡೆದು Ski ವಿಶ್ವ ವಿದಾ ನಿಲಯದ್ದ ಬಿ. ಎಸ್‌ಸಿ, ತರಗತಿ ಯನ್ನು ಸೇರಿದರು. ಬಿ. EE, ಯಲ್ಲಿ ಮೊಟ್ಟ ಮೊದಲನೆಯವರಾಗಿ ತೀರ್ಗಡೆ ಹೊಂದಿ ಭೌತವಿಜ್ಞಾನದ ಬಾಕ್ಸರ್‌ AN ಪಡೆದರು. ಇದಾದನಂತರ ಬಹು ಜನದ ಆಸೆಯಾದ " ಹೋಪ್‌ ಬಹುಮಾನ' ಹಡೆ ದರು. ಅವರು ಆರಿಸಿಕೊಂಡಿದ್ದ ವಿಷಯ ರಸಾಯನ ಶಾಸ್ತ್ರ. ಅದರಲ್ಲಿ ನಡೆದ್ದ ಸ್ಪರ್ಧೆಯಲ್ಲಿ ಕೇಂಬ್ರಿಡ್ಜ್‌ ಮತ್ತು ಲಂಡನ್ಸಿನ ಪೊಫೆಸರುಗಳು ಭಾಗವಹಿಸಿದ್ದರು. ಸ್ಫರ್ಧೆಯಲ್ಲಿ ಅಘೋರನಾಥರು ಮೊಟ್ಟಿ ಮೊದಲನೆಯ ವರಾಗಿ ಬಂದರು. ಎಡಿನ್‌ಬರೋದಿಂದ ಅವರು ಜರ್ಮನಿಯ ಬಾನ್‌ (Bonn) ವಿಶ್ವನಿದ್ದಾ ನಿಲಯಕ್ಕೆ ಹೋಗಿ ಅಲ್ಲಿ ಸ್ಪಟಕಶಾಸ್ತ್ರ (Crysto- ಜಾ ವಿದ್ಯು ಚ್ಚಕ್ತೆ, ಆಗ್ಕು ನಿಕ್‌ Fu ಶಾಸ್ತ ಇವುಗಳನ್ನು ಅಭ್ಯಾ ಸಮಾಡಿ 40 ತಕ್ಕ ೧೮೭೭ರಲ್ಲಿ ವಿಶ್ವ ವಿದ್ಯಾನಿಲಯದವರು ಡಿ. ಎಸ್‌ಸಿ. ಡಿಗ್ರಿಯನ್ಸಿ ತ್ರ ರು. ಇಂಥ ಡಿಗ್ರಿಯನ್ನು

ಸರೋಜಿನಿದೇವಫಿ

ಸಡೆದನರಲ್ಲಿ ಅಘೋರನಾಥರೆ ಪ್ರಥಮ ಭಾರತೀಯರು. ಹೀಗೆ ಪರದೇಶ ದಲ್ಲಿ ತಮ್ಮ ಕೀರ್ತಿಯನ್ನು ಹೆಬ್ಬಿಸಿ ಅವರು ಭಾರತಕ್ಕೆ ಹಿಂದಿರುಗಿದರು. ವೈಜ್ಞಾನಿಕ ನಿದ್ಯೆಯನ್ನು ಕರಗತಮಾಡಿಕೊಳ್ಳುವುದರಲ್ಲಿ ಅವರಿಗಿದ್ದ ಆಸೆ ಅಷ್ಟಿಷ್ಟಲ್ಲ. ತಂದೆಯ ತನ್ಮಯತೆಯಿಂದ ಮಗಳ ಜೀವನ ಪ್ರಭಾವ ಗೊಂಡಿತು. ಮಗಳೇ ಹೇಳಿದ್ದಾಳೆ ಹೀಗೆ: ನನ್ನ ತಂದೆಯಲ್ಲಿ ವೈಜ್ಞಾನಿಕ ರಹಸ್ಯಗಳನ್ನು ತಿಳಿಯುವ ಯಾವ ಪ್ರಬಲ ಉತ್ಪಂಶತೆಯಿತ್ತೋ ಅದೇ ನನ್ನ ಹೈದಯದಲ್ಲಿ ಸೌಂದರ್ಯೋಪಾಸನೆಯ ಪ್ರವೃತ್ತಿಯಾಗಿ ವಿಕಾಸ ಗೊಂಡಿತು.”

ಸರೋಜಿನಿ ತಂದೆಯಿಂದ ಎಷ್ಟು ಭಾಗ್ಯವಂತಳೋ ತಾಯಿಯಿಂದಲೂ ಅಷ್ಟೇ ಭಾಗ್ಯವಂತಳು- ತಾಯಿಯ ಹೆಸರು ವರದಸುಂದರಿ. ತಮ

ಪ್ರಣಯವನ್ನು ಕುರಿತು ಅಘೋರನಾಥರು ಮಕ್ಸಳೂಡನೆ ಆಗಾಗ್ಗೆ ಹೇಳಿ

ಕೊಂಡು ಸಂತೋಷಸಪಡುತ್ತಿದ್ದರು. BIR: 0೬% ನಿಧಿಯಾಗಿದ್ದ ಅಘೋರನಾಥರಿಗೆ ಸಾಹೆಸಕಾರ್ಯಗಳಲ್ಲಿ ತುಂಬ ಆಸಕ್ತಿ ಇತ್ತು. ಅಷ್ಟೇ ಆಸಕ್ತಿ ಸೌಂದರ್ಯವನ್ನು ಕಂಡು ಆನಂದಿಸುವುದರಲ್ಲಿಯೂ ಇತ್ತು. ವರದ. ಸುಂದರಿ ರೂಪಕ್ಕೆ ಹೆಸರಾಗಿದ್ದಳು. ರೂಸವತಿಯನ್ನು ಪಡೆಯಬೇಕೆಂಬ ಸಾಹಸಕ್ಕೆ ಕ್ಸ ಹಾಕಿದರು ಅಘೋರನಾಥರು. ಅವರಿಗೆ ದೋಣಿಯಲ್ಲಿ ಓಡಾಡುವುದೆಂದರೆ ಆಸೆ. ಬಂಗಾಳದಲ್ಲಿ ಹೂಗ್ಲಿ ನದಿಯು ಸಮುದ್ರವನ್ನು ಸೇರುವ ಮುನ್ನ ಛಿದ್ರಛಿದ್ರವಾಗಿ ಒಡೆದಿರುವುದು ಸರಿಯಷ್ಟೆ. ಅಲ್ಲಲ್ಲಿ ಭೂಮಿಯಿರುವ ಕಡೆ ಹಳ್ಳಿಗಳಿವೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ದೋಣಿಯಲ್ಲಿ ಹೋಗಬೇಕು. ಅಲೆಯುವ ಸ್ವಭಾವವುಳ್ಳ ಅಘೋರ ನಾಥರು ಹಳ್ಳಿಯಿಂದ ಹಳ್ಳಿಗೆ ದೋಣಿಯಲ್ಲಿ ಓಡಾಡುತ್ತಿದ್ದರು. ಕಾಲ ದಲ್ಲಿ ಡಕಾಯಿತರು ಹೆಚ್ಚಾಗಿದ್ದರು. ಅಂತಹ ಡಕಾಯಿತರ ಗುಂಸೆಇಂದ ರೊಡನೆ ಅಘೋರನಾಥರು ಸ್ನೇಹೆ ಬೆಳೆಸಿದರು. ಬಹಳ ಸ್ವಾರಸ್ಯವಾಗಿ ಮಾತನಾಡುತ್ತಿದ್ದ ಅವರ ಸ್ನೇಹ ಡಕಾಯಿತರಿಗೂ ಹಿಡಿಯಿಸಿತು. ಬರು: ಬರುತ್ತ ಅವರೇ ಡಕಾಯಿತರ ಯುವಕ ಮುಖಂಡರಾದರು. ಒಂದು ದಿನ ಅಘೋರನಾಥರು ತಮ್ಮಜಥಿವಾರವನ್ನು ಕಿತ್ತು ನದಿಗೆ ಬಿಸಾಡಿ ಬಿಟ್ಟರು, ಇದನ್ನು ಕಂಡು ಡಕಾಯಿತರು ಆಶ್ಚರ್ಯನಟ್ಟಿ ರಲ್ಲದೆ ಅವರ ಧ್ಸೈರ್ಯ ವನ್ನು ಕೊಂಡಾಡಿದರು. ಜನಿವಾರವನ್ನು ಬಿಸಾಡುವಾಗ ಅಘೋರನಾಥರು

ಬನನ

ಕಾಲ

ಕಾ ಜೆ

NE hae ಜಿ 4 ಬು 1

ಜು

PN lg KM, ಕ, ಟಿ ee it Ns ಗಯ NN pe We iM, hn ಆಗ ಸಜ SSR ಹ] ಜಿ

ES ಭ್ಯ ಸಫಲ

ಬ]

ಜು ಸಿ

ಬಸ

ಸ್‌

ರಾ

ನ:

ಗ!

ಟ್‌ ಭಾರ

ಲಿ J

1

ತಸ ಜ್‌

ಸ್‌

ಕಸಲ ಗಾ!

ಗಗ

ಸ್ಯ ಸಿಗ

ಟ್‌

1: ಭಯು

eu US A NN

ಜ್‌

Me

ಗ. Wy

a)

PN ಗ, AH sey ಗ] 1 ಲ್ಲ

ಗೆ ಜಂ

ಸಟ

NN,

ಜ್‌ MS

ತಂದೆತಾಯಿ

" ಇದು ಕೇನಲ ಹೊಸೆದ ದಾಗ. ಇದರಲ್ಲಿ ಪವಿಶ್ರತೆಯೇನೂ ಇಲ್ಲ..... ಪವಿತ್ರತೆಯಿರುವುದು ಮನಸ್ಸಿನಲ್ಲಿ, ಹೃದಯದಲ್ಲಿ...” ಎಂದು ಸಾರಿದರು. ಅದು ನಿಜವಾಗಿಯೂ ಕೆಚ್ಚೆದೆಯ ಕೆಲಸ, ಇಲ್ಲಿಗೆ ಸುಮಾರು ನೂರು ವರ್ಷ ಗಳ ಹಿಂದೆ ಹದಿನಾಲ್ಫು ವರ್ಷದ ಹುಡುಗ ಜನಿವಾರವನ್ನು ಕಿತ್ತೆಸೆದದ್ದು ಅತ್ಯಾಶ್ಚರ್ಯವೇ ಸರಿ. ಇದಕ್ಸೆಂತಲೂ ಆಶ್ಚರ್ಯವಾದ ಮತ್ತೊಂದು ಕೆಲಸ ಮಾಡಿದರು ಅಘೋರನಾಥರು,. ಒಂದು ದಿನ ಅವರು ವರದಸುಂದರಿ ಯನ್ನು ಕಂಡರು. ಆಗ ಆಕೆಗೆ ಕೇನಲ ಒಂಬತ್ತು ವರ್ಷ. ಕಂಡುಡೇ ತಡ ಅವರಿಗೆ ಆಕೆಯಲ್ಲಿ ಪ್ರೇಮ ಅಂಕುರಿಸಿತು. ವರದಸುಂದರಿಯೂ ಅಘೋರ ನಾಥನನ್ನು ಪ್ರೀತಿಸಿದಳು. ಆದರೆ ಆಕೆಯನ್ನು ಪಡೆಯುವುದು ಹೇಗೆ? ಡಕಾಯಿತರು ಅವರ ಸಹಾಯಕ್ಕೆ ಬಂದರು. ಒಂದು ದಿನ ಅವರು ಆಕೆ ಯೊಡನೆ ಪಲಾಯನಮಾಡಿದರು. ಒಟ್ಟ ನಲ್ಲಿ ಅವರು ಸ್ವಾಮಿವಿವೇಕಾ ನಂದರು ಹೇಳಿದಂತೆ ನಾಲ್ಬು ಅಕ್ಷರಗಳನ್ನು ಕಲಿತು ಗರ್ವದಿಂದ ಉಬ್ಬಿ ಹಿಂದೂಗಳಲ್ಲಿ ಮಾತ್ರವೇ ಲಭಿಸುನ ಜಾತಿಭ್ರಾಂತರೂ, ಮೂರ್ಬರೂ ದಯಾಹೀನರೂ ಕೃತ್ರಿಮಜೀನಿಗಳೂ, ನಾಸ್ತಿಕ ಕ್ರೆಮಿಗಳೂ ಆದ ಹೇಡಿ ಗಳಂತೆ” ಬಾಳಿ ಬದುಕಲು ಇಷ್ಟಪಡಲಿಲ್ಲ.

ಪ್ರ ಪ್ರಸಂಗವನ್ನು ವರ್ಣಿಸುತ್ತ ಸರೋಜಿನಿಯವರ ತಮ್ಮ ಹರೀಂದ್ರ ನಾಥ ಚಟ್ಟೋಪಾಧ್ಯಾಯರು ಹೀಗೆ ಹೇಳುತ್ತಾರೆ : “ಇದೆಲ್ಲ ನಿಜವಾದ ಡಕಾಯಿತರ ಕಥೆಯಂತೆ ಕಾಣುತ್ತದೆ. ಆದರೆ ತಾಯಿಯನ್ನು ತಂದೆ ಹಳ್ಳಿ ಯಿಂದ ಕದ್ದುತಂದುದಕ್ಕಾಗಿ ನಾವು ಕೃತಜ್ಞರು. ಇಲ್ಲದಿದ್ದರೆ ನಮಗೆ " ಅರ್ಧ ದೇವತೆ ಅರ್ಧಪತ್ಷಿ'ಯಂತಿದ್ದ ತಾಯಿಯನ್ನು ಪಡೆಯುವ ಸೌಲಭ್ಯ ದೊರೆಯುತ್ತಿರಲಿಲ್ಲ.

ಮುಂದುವರಿಯುತ್ತ ಅವರು ತಾಯಿಯ ಬಗ್ಗೆ ಹೀಗೆ ನುಡಿದಿದ್ದಾರೆ.

« ಶಾಯಿಯ ಮುಖ ಚಂದ್ರ ನಂತಿತ್ತು. ನೀವು 'ಸರೋಜಿನಿಯ ಕಣ್ಣು ಗಳನ್ನು ಹಾಗೆಯೇ ಶಕ್ರಿಸುತಿ. ರಿ. ಅಳಿ ಆಲೋಚನೆಯಲ್ಲಿ ಮಗ್ಗ ವಾದಾಗ ಅಕೆಯ ಕಣ್ಣುಗಳಲ್ಲಿ ಕಾಣುನ ಸೌಮ್ಯ ದೃ ದಹಿ ಯನ್ನು ನೀವು ತಾಯಿಯ ಕಣ್ಣು ಗಳಲ್ಲಿಯೂ ME ದ್ರ ದಲ್ಲಿ ದಯ, ಪ್ರೀತಿ ಹಾಗೂ ಧ್ಯಾನ ತುಂಬಿ ತುಳುಕುತ್ತಿತ್ತು.”

ವರದಸುಂದರಿಯೂ ಸಾಕಷ್ಟು ವಿದ್ಯಾವಂತಳಾಗಿದ್ದಳು. ಬಂಗಾಳೀ

ಸರೋಜಿನಿದೇನಿ

ಭಾಷೆಯಲ್ಲಿ ಅನೇಕ ಕನನಗಳನ್ನು ರಚಿಸಿದ್ದಳು. ತನ್ನ ಸುಶ್ರಾವ್ಯವಾದ ಕಂಠದಿಂದ ಹಾಡುತ್ತಲೂ ಇದ್ದಳು. ಹಳ್ಳಿ ಯಲ್ಲಿ ಓದುತ್ತಿದ್ದಾಗ ಆಕೆ ಹಾಡುಗಾರಿಕೆಗೆ ವೈಸ್‌ರಾಯರ ಚಿನ್ನದ ಸದಕ ಪಡೆದಿದ್ದಳು. ಹಾಡಿದರೆ ಕಣ್ಣಿ ನಲ್ಲಿ ನೀರು ತುಂಬಿ ಬರುತ್ತಿತ್ತು. ಒಳಗಿನ ದುಃಖವಾವುದನ್ನೋ ಮರೆಯಲು ಹಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಅಭಘೋರನಾಥರು ಒಬರೇ ಮನೆಯಲ್ಲಿದ್ದಾಗ ತಮ್ಮ ಅಚ್ಚುಮೆಚ್ಚಿನ ಮಡದಿಯ ಬಾಯಿಂದ ಕನನಗಳನ್ನೋ ಅಥವ ಬೇಕೆ ಯಾನ್ರದಾದರು ಹಾಡನ್ನೋ ಕೇಳಿ ಸಂತೋಷಪಡುತ್ತಿದ್ದರು- ಹೈದರಾಬಾದಿನ ಚಟ್ಟೋಪಾಧ್ಯಾಯರ ಮನೆ ಹೋಗಿಬರುವವರಿಗೆಲ್ಲ ಕವಿತೆಯ ಹಾಗೂ ಗಾನದ ಗೇಹೆವಾಗಿತ್ತು.

ಒಬ್ಬ ನಲ್ಲಿ ಸರೋಜಿನಿಯ ತಂದೆತಾಯಿಗಳು ಕೇವಲ ಸಾಮಾನ್ಯ ಮಾತಾನಿತ್ಸಗಳಾಗಿರಲಿಲ್ಲ. ಅವರು ಅಪೂರ್ವ ಆಧ್ಯಾತ್ಮಿಕ ವ್ಯಕ್ತಿಗಳಾ ಗಿದ್ದರು. ಮಾನವ ವಿಕಾಸದಲ್ಲಿ ಅವರು ಉನ್ನತ ಶಿಖರಗಳಾಗಿದ್ದರು ;. ಕತ್ತಲೆಯ ಜೀವನದಲ್ಲಿ ಅವರು ನಡೆಯುತ್ತಿದ್ದ ಎರಡು ಅಲೌಕಿಕದೀಪ ಗಳಾಗಿದ್ದರು. ಹೋದೆಡೆಯಲ್ಲೆಲ್ಲಾ ದಾರಿಗರಿಗೆ ಬೆಳಕಾಗಿದ್ದರು. ಸಿಕ್ಕವರ ನ್ನೆಲ್ಲಾ ತರೆಸನರಿ ಧೈರ್ಯಕೊಡುತ್ತಿದ್ದರು.”

ಬಂಗಾಳದಿಂದ ಅಘೋರನಾಥರು ಹೈ ದರಾಬಾದಿಗೇಕೆ ಬಂದರೆಂದು ನೋಡೋಣ. ಹೈದರಾಬಾದಿನ ಆಗಿನ ನೈಜಾಮರು ತಮ್ಮ ರಾಜ್ಯದಲ್ಲಿ ವಿದ್ಯಾಭ್ಯಾಸವನ್ನು ಹರಡಬೇಕೆಂಬ ಆಕಾಂಕ್ಸೆಯುಳ್ಳವರಾಗಿದ್ದರು- ಅಘೋರನಾಥರ ಪ್ರಖ್ಯಾತಿಯನ್ನು ಕೇಳಿದ್ದ ಅವರು ಕೆಲಸಕ್ಕಾಗಿ ಅವ ರನ್ನು ಆಹ್ವಾನಿಸಿದರು. ಹೈದರಾಬಾದಿಗೆ ಬಂದ ಅಫಘೋರನಾಥರು ಮೊಟ್ಟ ಮೊದಲು ನೈಜಾಮರ ಕಾಲೇಜ 'ನ್ನು ತೆರೆದರು. ಅನಂತರ ರಾಜ್ಯದಲ್ಲೆ ಲ್ಲಾ ಬಾಲಕ ಬಾಲಕಿಯರ ಶಾಲೆಗಳನ್ನು ಸ್ಥಾಪಿಸಿದರು. ಅವರು ಮಾಡಿದ ಉಪಕಾರ ಸ್ಮರಣೆ ಮಾಡುತ್ತ ಜನರು ಅವರನ್ನು « ವಿದ್ಯಾ ಭ್ಯಾಸದ ಓಿತ್ಸ ವೆಂದು ಹೊಗಳಿದರು. ಕಾಲೇಜಿನ ಸ್ನಾಸಕರಾದ ಅವರೇ ಅದರ ಪ್ರಿನ್ಸಿಸಾಲರೂ ಆದರು. ಹೀಗಾಗಿ ಬಂಗಾಳದಲ್ಲಿ ಹುಟ್ಟದ ಸಸಿ ಹೈದ ರಾಬಾದಿನಲ್ಲಿ ಫಲಬಿಟ್ಟತು.

ಪ್ರಿನ್ಸಿಪಾಲ್‌ ಹುದ್ದೆಯಿಂದ ನಿವೃ ತ್ತರಾದನಂತರವೇ ಅವರು ಬಂಗಾ ಳಕ್ಳೆ ಹಿಂದಿರುಗಿ ಹೋದದ್ದು, ಅಲ್ಲಿಗೆ ಹೋದಮೇಲೆ ಅವರು ಕಲ್ಕತ್ತೆಯ

ತಂದೆತಾಯಿ

ಕಾಲೇಜಿನ ಪ್ರಿನ್ಸಿಪಾಲರ ಆಹ್ವಾನವನ್ನು ಮನ್ನಿಸಿ ರಸಾಯನ ಶಾಸ್ತ್ರದ ಅಧ್ಯಾಪಕರಾದರು. ತಮ್ಮ ಜೀವನದ ಯಾತ್ರೆ ಮುಗಿಯುವವರೆಗೂ ಅವರು ಅಧ್ಯಾಸಕರಾಗಿಯೇ ಇದ್ದರು. | ಅಘೋರನಾಥರು ನಿಜ್ಞಾನದ ಬಗ್ಗೆ ಇಟ್ಟಿದ್ದ ಪ್ರೇಮ ಅಗಾಧ ವಾದದ್ದು. ಅದರಲ್ಲೂ ರಸಾಯನ ಶಾಸ್ತ್ರವೆಂದರೆ ಇನ್ನೂ ಹೆಚ್ಚಿನ ಪ್ರೇಮ. ಅಷ್ಟೇ ಪ್ರೇಮ ಸತ್ಯವನ್ನು ಹೇಳುವುದರಲ್ಲಿಯೂ ಇತ್ತು. ಸುಳ್ಳು ಹೇಳಿದರೆ ಯಾರನ್ನೂ ಅವರು ಕ್ಷಮಿಸುತ್ತಿರಲಿಲ್ಲ. ಒಮ್ಮೆ ಅವರ ಮಗ ಹರೀಂದ್ರನಾಥ ಮತ್ತು ಮಗಳು ಸುನಾಳಿನಿ ಕಟಕ್ಳಿ ನಿಂದ ಕಲ್ಪತ್ತೆಗೆ ಪ್ರಯಾಣ ಮಾಡಿದರು, ಎಲ್ಲರೂ ಮೂರನೇ ತರಗತಿಯ ಟಕೆಟ್ಟುಗಳನ್ನು ಕೊಂಡುಕೊಂಡರು, ಹೆರೀಂದ್ರನಾಥ ಚಿಕ್ಕವನಾಗಿ ಕಾಣುತ್ತಿದ್ದ. ಕಾರಣದ ಮೇಲೆ ಅವನಿಗೆ ಅರ್ಧ ಟಕಟ್ಟು ಕೊಂಡರು. ವಾಸ್ತವವಾಗಿ ಆವನು ಚಿಕ್ಕವಯಸ್ಸಿನವನಾಗಿರ ಲಿಲ್ಲ ; ಹಾಗೆ ಕಾಣುತ್ತಿದ್ದ ಅಪ್ಪ--ಅಂತೂ ಸ್ವಲ್ಪ ದುಡ್ಡು ಉಳಿಸಿದೆನೆಂಬ ಸಂತೋಷದಿಂದ ಹರೀಂದ್ರನಾಥ ನಿಚಾರವನ್ನು ತಂದೆಗೆ ನಳ " ನನಗೆ ಹಸೆ ರಡು ನರ್ಷಕ್ಕಿ ೦ತ ಹೆಚ್ಚಾಗಿ eo ಗಿರುವುದನ್ನು . ಟಕಟ್‌ ಕಲೆಕ್ಟ ರ್‌? ಪತ್ತೆ ಹಚ್ಚ ದೇ ಹೋದ” ಜಾ ಜಳ ಆಸಕ್ತಿಯಿಂದ ತಂದೆಯ ಮುಂಜಿ ಬೆನ್ನುಚಪುರಿಸಿಕೊಂಡ ಮಗೆ, ಅದನ್ನು ಕೇಳಿದ ತಂದೆಯ ಕಣ್ಣು ಕೆಂಡದಂತಾದುವು... ತುಟಿ ಅದುರಿದವು. ಗುಡುಗಿನಂತೆ " ಏನೋ ರೈಲ್ವೆ ಕಂಪೆನಿಗೆ ಮೋಸ ಮಾಡಿದೆಯಾ!” ಎಂದು ಗರ್ಜಿಸಿದರು. ಹರೀಂದ್ರ ಅರಳಿಯ ತಳಿರಂತೆ ಅದುರಿಹೋದ. ಮತ್ತೊಮ್ಮೆ ಹರೀಂದ್ರ ಒಂದು ಸುಳ್ಳು MN ಅದು ತಂದೆಗೆ ತಿಳಿಯಿತು, ಅವರು (ಮಗೂ! ಎಂದು ಕರೆದರು. ಧ್ವನಿಯಲ್ಲಿ ನಿನೋ ಅನಾಹುತದ ಸೂಚನೆ ವ್ಯಕ್ತ ವಾಗುತ್ತಿತ್ತು. ಸುಳ್ಳು ಹೇಳಿದೆಯಾ |! ಎಂದು ಕಿರಿಚಿದರು ಹತಿ ತ್ರಿರಕ್ಸೆ ಆಜ ಮಗನನ್ನು ಚತು ಮೆಡ್ಡ ರಿಸಿದ ಕಣ್ಣು ಗಳು ಮಗನ ಕಣು ಗಳನ್ನು ಚುಚ್ಚು ತ್ರಿದ್ದು ವು. ಮುಂದೆ ಮಾತಾಡಲಾರದೆ ಅವರು " ಹೋಗು? 6% 1 ಟ್ರಿ ಹೋಗು? ಎಂಬ ತಂದೆಯ ಮಾತು! ಅದು ಆಟಂ ಬಾಂಬಿನಷ್ಟು ಶಕ್ಕಿಯುತವಾಗಿತ್ತು

೩. ಬಾಲ್ಯ ಮತ್ತು ವಿದ್ಯಾಭ್ಯಾಸ

ಇಂತಹ ಮಾತಾಪಿತೃಗಳ ಹೊಟ್ಟೆ ಯಲ್ಲಿ ಪ್ರಥಮ ಶಿಶುವಾಗಿ ಜನಿಸಿ ದಳು ಸರೋಜಿನಿ. ಮಾತಾಪಿತೃಗಳಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳು, ನಾಲ್ಫು ಗಂಡು ಮಕ್ಕಳು. ೧೮೭೯ ನೇ ಫೆಬ್ರವರಿ ೧೩ ನೇ ತಾರೀಖು ಹೈದರಾಬಾದಿನ ಅಘೋರನಾಥರ ಮನೆಯಲ್ಲಿ ಆನಂದವೋ ಆನಂದ. ಅಂತೆಯೇ ನಾಡು ಒಬ ಮಹಾಕನ್ಯೈಯ ಆಗಮನಕ್ಕಾಗಿ ಹರ್ಷಗೊಂಡಿತು. ತೊಟ್ಟಿಲಲ್ಲಿ ಮಲಗಿ ಲಲ್ಲೆಯಾಡುತ್ತಿದ್ದ ಕಿಶೋರಿಯನ್ನು ಕಂಡ ಜನ ಭಾರತದ ಸಿಂಹಿಣಿಯಾಗೆಂದು ಹರಸಿದರು. ಹೆರಕೆಯಲ್ಲಿ ಹಿಂದೂ ಮುಸಲ್ಮಾನ ಕ್ರೆಸ್ತರೆಲ್ಲ ಭಾಗಿಗಳಾಗಿದ್ದರು. ಏಕೆಂದರೆ ಅಘೋರನಾಥರ ಮನೆಯಲ್ಲಿ ಅವಕೆಲರೂ ಬರಲು ಅವಕಾಶವಿತ್ತು. ಮಾತಾಪಿತ್ಸ ಗಳ ಎದೆ

ತುಂಬಿ ಬಂತು. ಮಗಳು ಚಿರಸ್ಕಾ ಯಿಯಾದ ಕೀರ್ತಿಗಳಿಸಲದು ದೇವ ರನ್ನು ಪ್ರಾ ರ್ಥಿಸಿದರು.

ಅಿಫೋರನಾಧರ ಮನೆಯಲ್ಲಿ ಮನೆತುಂಬ ಮಕ್ಕಳು. ಜೊತೆಗೆ ಅವರೂ ಅವರ ಪತ್ನಿ ವರದಸುಂದರಿಯೂ ಆತಿಥ್ಯದಲ್ಲಿ ಬಹು ಉದಾರಿಗಳು. ಬಂದವರಿಗೆಲ್ಲ ಮನೆಯಲ್ಲಿ ಆಶ್ರಯ. ಒಟ್ಟ ನಲ್ಲಿ ಅವರು ಜೀವನದ ಮಥ್ಯನಿಂತ ಹೆಮ್ಮರವಾಗಿದ್ದರು. ಮರದ ನೆರಳನ್ನು ಯಾರು ಬೇಕಾದರೂ ಆಶ್ರ ಯಿಸಬಹುದಾಗಿತ್ತು. ಕೈಕಾಲು ಮುರಿದುಕೊಂಡವ, ಗಾಯಗೊಂಡವ, ಕಾಯಿಲೆಯವ, ನಿರಾಶನಾದವ, ಹುಚ್ಚು ಹಿಡಿದವ ಇವರಾರು ಬೇಕಾ ದರೂ ಬರಬಹುದಿತ್ತು. ಹೀಗಾಗಿ ಅಘೋರನಾಥರು ಮನೆಗೆ ಬಂದ ಅನೇಕ ಜನರೊಡನೆ ಆರಾಮ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದ ದೃಶ್ಯ ಸಾಮಾನ್ಯವಾದ ವಿಷಯವಾಗಿತ್ತು. “ಆ ಸಮೂಹದಲ್ಲಿ ದೊಡ್ಡವ ರಿರುತ್ತಿದ್ದರು ಚಿಕ್ಕವರಿರುತ್ತಿದ್ದರು. ಜ್ಯೋತಿಷ್ಟರಿರುತ್ತಿದ್ದರು, ಕಳ್ಳರಿರು ತ್ತಿದ್ದರು. ಇವರ ಮಧ್ಯೆ ನಮ್ಮ ತಂದೆ ನವಾಬನಂತೆ ಮೀಸೆ ತಿರುವುತ್ತ ಶುಳಿತಿರುತ್ತಿ ದ್ದ. ಭಿಕಾರಿಯೊಬ್ಬ ಎಷ್ಟೋ ದಿನಗಳಿಂದ ಸಾ )ಿನಮಾಡದೆ ಹೊಡಿಯಲೊಂದು ಬಟ್ಟೆಗೂ ಗತಿಯಿಲ್ಲದೆ ಅವರ ಬಳಿ ಕುಳಿತರುತ್ತಿ ದ್ದ. ಗಾಂಜಾ ಬೀಡಿ ಚುಟ್ಟಿ ಸೇದಿಕೊಂಡು "ತಿಂಗಳುಗಟ್ಟ ಲೆ ಊಟಿಮಾಡಡೇ

ಬಾಲ್ಕ ಮತ್ತು ವಿದ್ಯಾಭ್ಯಾಸ

ಇರುತ್ತಿದ್ದ ಫಕೇರರಿರುತ್ತಿದ್ದರು. ಆದರೆ ಅವರು ಊಟ ಮಾಡುವ ತಿಂಗಳು ಬಂದಾಗ ಮನೆಯಲ್ಲಿ ಮಾಡಿದ್ದನ್ನೆಲ್ಲಾ ನುಂಗಿಬಿಡುತ್ತಿದ್ದರು. ಆಗ ಅಡುಗೆಯ ಮನೆಯ ಗತಿ ಹೇಳತೀರದು. ಆದರೆ ನನ್ನ ತಾಯಿಯ ವರದ ಹೆಸ್ತ ವಂತು ಯಾರು ಬಂದರೂ i ಕಳುಹಿಸ ಸುತಿ ರಲಿಲ್ಲ. ಶಿ ಮತಿ ಅಘೋರನಾಥರ "ದಾಲ್‌? ಎಂದರೆ ಸಿದ್ಧಿ ಯಾಗಿ ಹೋಗಿತ್ತು. ಮನೆಯ ಲ್ಲಿದ್ದ ಹೆಣ್ಣಾ ಳುಗಳ ಸೈನ್ಯ ವು ಒಬ ರಮೇಶೊಬ್ಬರು ಬಂದು. ಅಡುಗೆಯ ಬಾಗಿಲಿನಲ್ಲಿ “ನಿಂತು ತಾಯಿಯಿಂದ “ದಾಲನ್ನು ಬಡಿಸಿಕೊಂಡು ಹೋಗುತ್ತಿ, ದ್ದ ರು” ಹೀಗೆ ಮಗನೇ ತಂದೆಯ ಬಗೆಗೆ ಹೇಳಿದಾ ಗಾಥೆ

“ತಾಯಿ ಮಗಳ ಯೋಗಕ್ಷೇಮದ ಬಗೆಗೆ ಸದಾ ಕಣ್ಣಿ ಟ್ರ ರುತ್ತಿ ದ್ದ ಛು, ಮಗುವಿನ ಆಕೆ ಆಕಾಂಕೆ ್ಲಿಗಳೇಸೆಂದು ತಿಳಿದು ಅವು rd ದ್ದರೆ ಉತ್ತೇಜನ ಕೊಡುತ್ತಿದ್ದಳು. ಸರೋಜಿನಿಗೆ ಸ್ವಚ್ಛತೆ, ಶುದ್ಧತೆ, ಮತ್ತು ಸೌಂದರ್ಯಗಳ ಮೇಲೆ ಅಗಾಧ ಆಸಕ್ತಿಯಿತ್ತು. ಇದನ್ನು ಕಂಡು ತಾಯಿ ಸಂತೋಷಪಡುತ್ತಿದ್ದಳು. ಅವುಗಳಿಗೆ ಪ್ರೋತ್ಸಾಹ ಕೊಡುವುದಕ್ಕೆ ತಾಯಿ ಹಿಂದು ಮುಂದು ನೋಡುತ್ತಿರಲಿಲ್ಲ. ತನಗೆ ಗೊತ್ತಿದ್ದ ಸತ್ಪುರುಷರ ಕಥೆಗಳನ್ನು ಅವರ ಮಹಾಸಾಧನೆಗಳನ್ನು ಮಗಳಿಗೆ ಬಣ್ಣಿಸುತ್ತಿದ್ದಳು. ತಾಯಿ ಮಗಳಿಗೆ ಆಗಾಗ್ಗೆ ಸೋಲಿನಲ್ಲಿ ಕುಗ್ಗದೆ ಗೆಲುವಿನಲ್ಲಿ ಅತಿ ಹಿಗ್ಗದೆ ಬಾಳುವುದೇ ಮಾನವತೆಯ ಆದರ್ಶ.' ಎಂದು ಬುದ್ಧಿ ಹೇಳುತ್ತಿದ್ದಳು. ಮಗಳ ಹೃದಯ ಕವಿತೆಯ ಕಡೆ ಒಲಿಯುತ್ತಿದ್ದುದನ್ನು ಕಂಡ ತಾಯಿ ಪ್ರೋತ್ಸಾಹ ನೀಡಿದಳು. ತನ್ನ ಬಂಗಾಳೀ ಕವಿತೆಗಳ ಸವಿಯನ್ನು ಮಗಳಿಗೆ ಉಣಿಸಿದಳು. ಅನಂತರ ಸರೋಜಿನಿ ಕವಿಯಿತ್ರಿಯಾದುದು ಹೆಚ್ಚಾಗಿ ತಾಯಿಯಿಂದಲೇ ಎಂದು ಹೇಳಬಹುದು.

, ಹೀಗೆ ತಾಯಿ ಮಗಳ ಮಾನಸಿಕ ಬೆಳವಣಿಗೆಗೆ ನೀರಿರೆಯುತ್ತಿ ದ್ದರೆ ತಂದೆ ಮಗಳ ಏಳಿಗೆಗೆ ತಮ ದೇ ಆದ ರೀತಿಯಲ್ಲಿ ಪ್ರೊ (ತ್ಸಾಹ ನೀಡುತ್ತಿ ದ್ದ ರು. ಅವರಿಗೆ ಮಗಳ LA ವರ್ತನೆ ತುಂಬಾ ಬಡಿಸಿತು. ಜಾತಿ ಮತಗಳ ಭೇದವೆಣಿಸದೆ ಆಕೆ ಎಲ್ಲಾ ಮಕ್ಸಳನ್ನು ಪ್ರೀತಿಸುತ್ತಿದ್ದಳು. ಆಕೆಯ ಸಹಸಾಠಿಗಳಲ್ಲಿ ಹಿಂದೂ ಮುಸಲ್ಮಾನ ಬಾಲಕರೆಲ್ಲ ಇದ್ದರು. ಸದ್ವರ್ತನೆಯನ್ನು ಕಂಡು ತಂದೆ ತುಂಬ ಹರ್ಹಿಸುತ್ತಿದ್ದರು.

ಅಫಘೋರನಾಥರ ಮನೆಗೆ ನಾನಾ ಜಾತಿಯ ಜನರು ಬರುತ್ತಿದ್ದರು;

ಗಿಂ ಸರೋಜಿನಿದೇಏಿ

ಪರಿಚಯಸ್ಮರು ಬರುತ್ತಿದ್ದರು, ಅಸರಿಚಯಸ್ಮರು ಬರುತ್ತಿದ್ದರು. ಅವರಿದ್ದ ಸ್ಥಳವನ್ನು ( ನಿದ್ಯಾಪೀಠ' ವೆಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು: ಮೌಲ್ವಿಗಳು, ಪಂಡಿತರು, ಪರಂಗೀ ವಿದ್ವಾಂಸರು, ಲಾಯರುಗಳು, ಸಾರ್ವ ಜನಿಕರು-- ಒಟ್ಟಿ ನಲ್ಲಿ ಎಲ್ಲರೀತಿಯ ಪಂಡಿತರೂ, ವಿದ್ವಾಂಸರೂ ಅಲ್ಲಿ ನೆರೆಯುತ್ತಿದ್ದರು. ಪ್ರ ಸನ್ನಿವೇಶದಲ್ಲಿ ಬೆಳೆದ ಸರೋಜಿನಿಯಲ್ಲಿ ಜಾತಿ ಮತ ಭೇದಭಾವನೆ ಸ್ವಲ್ಪವೂ ಇಲ್ಲದೇ ಹೋದದ್ದು ಆಶ್ಚರ್ಯವೇನಲ್ಲ. ಹಿಂದೂ ಮುಸಲ್ಮಾನರು ಒಂದೇ ಎಂಬ ಭಾವನೆ ಆಕೆಯಲ್ಲಿ ನೆಲೆಯಾಗಿ ನಿಂತದ್ದು ಇಂಥ ಸನ್ನಿವೇಶ ಮಹಿಮೆಯಿಂದಲೇ. ಮುಂದೆ ಆಕೆ ಹಿಂದೂ ಮುಸಲ್ಮಾನರು ಬಾಂಧವ್ಯಕ್ಕಾಗಿ ಬಹುವಾಗಿ ದುಡಿಯುವುದಕ್ಕೆ ಕಾರಣ ವನ್ನು ನಾವಿಲ್ಲಿ ಕಾಣಬಹುದು.

ಸಾಮಾನ್ಯವಾಗಿ ಸರೋಜಿನಿಗೆ ಮಕ್ಸಳು ಆಡುವ ಆಟಿಗಳಲ್ಲಿ ಅಸ್ಟು ಆಸಕ್ತಿ ಇರಲಿಲ್ಲ. ಮಕ್ಕಳಕೂಟವನ್ನು ಕಟ್ಟಿಕೊಂಡು ತಾನೊಂದು ಕುರ್ಚಿಯಮೇಲೆ ಕುಳಿತು ಮುದ್ದಾದ ಕಥೆಗಳನ್ನು ಹೇಳುವುದೆಂದರೆ ಅವಳಿಗೆ ಪ್ರೀತಿ, ಮಕ್ಕಳು ನಿಶ್ಶಬ್ದವಾಗಿ ಕುಳಿತು ಕತೆಗಳನ್ನು ಕೇಳುತ್ತಿದ್ದರು. ಕುಳಿತಲ್ಲಿಂದ ಕದಲುತ್ತಲೇ ಇರಲಿಲ್ಲ. ಇದು ಮುಂದೆ ಸರೋಜಿನಿ ಪ್ರಸಿದ್ಧ ವಾಗ್ಮಿಯಾದುದರ ಮುನ್ಸೂಚನೆ.

ಅಘೋರನಾಥರ ಮನೆಯ ಹಿಂಜಿ ಕಾಡಿನೋಪಾದಿಯಲ್ಲಿ ಒಂದು ತೋಟವಿತ್ತು. ಇಲ್ಲಿ ಹೆಚ್ಚು ಹೊತ್ತು ಸರೋಜಿನಿ ಕಾಲಕಳೆಯುತ್ತ ಪ್ರಕೃತಿಯೊಡನೆ ನೇರ ಸಂಪರ್ಕಬೆಳೆಸಿದಳು.

ಸರೋಜಿನಿಗೆ ಓದಿನಲ್ಲಿ ಬಹಳ ಆಸಕ್ಕಿ. ತಂದೆ ಇದನ್ನು ಓದಬೇಕು ಅದನ್ನು ಓದಬಾರದು ಎಂದು ಅಡ್ಡಿ ಪಡಿಸುತ್ತಿರಲಿಲ್ಲ. ಮಗಳಿಗೆ ಶ್ರೀಮಂತ ರೀತಿಯ ವಿದ್ಯಾಭ್ಯಾಸದ ಏರ್ಪಾಟನ್ನೇ ಮಾಡಿದರು. ಶಿಕ್ಷಣ ಕೊಡಲು ಒಬ ಳು ಇಂಗ್ಲೀಷು ಉಪಾಧ್ಯಾಯಿನಿಯನ್ನೂ ಒಬಳು ಫ್ರೆಂಚ್‌ ಉಪಾ ಧ್ಯಾಯಿನಿಯನ್ನೂ ನೇಮಿಸಿದರು. ಆಕೆಗೇ ಒಂದು ಪ್ರತ್ಯೇಕ ಕೋಣೆ, ಒಂದು ಪುಸ್ತಕ ಭಂಡಾರ, ಕುರ್ಚಿ ಮೇಜುಗಳು, ಬಟ್ಟೆ ಬರೆ ಇಡುವ ಬೀರು ಮೊದಲಾದವು. ಸರೋಜಿನಿಯಿದ್ದ ಕೋಣೆ ಬಹು ಸುಂದರವಾಗಿತ್ತಂತೆ. ಆನೆಯ ಮೂರು ತಲೆಗಳನ್ನು ಹೊತ್ತ ಸುಂದರವಾದ ಮೇಜಿನ ಮೇಲೆ " ಅರೇಬಿಯನ್‌ ನೈಟ್ಸ್‌ ಕಥೆಗಳ ಪುಸ್ತಕವಿತ್ತು. ಇದರಲ್ಲಿ ಎಡ್ಮಂಡ್‌

ಬಾಲ್ಕ ಮತ್ತು ವಿದ್ಯಾಭ್ಯಾಸ ೧೧

ಡುಲಾಕರು ಚಿತ್ರಿಸಿದ ಸುಂದರ ಚಿತ್ರಗಳಿದ್ದು ವು. ಅಕೃನ ಕೋಣೆ ಯಲ್ಲಿದ್ದ ಪುಸ್ತಕವನ್ನು ಆಗಾಗ್ಗೆ ಕದ್ದು ನೋಡಿ ಸಂತೋಷಗೊಳ್ಳು ತ್ತಿದ್ದ ಹರೀಂದ್ರನಾಥರು ಇದರಲ್ಲಿದ್ದ ಬಾಬಾ ಮುಸ್ಮ ಪಾನ ಚಿತ್ರವನ್ನು ಕುರಿತು ತಮ್ಮ ಬಾಲ್ಯದ ಭಾವನೆಗಳನ್ನು ವಿವರಿಸಿದ್ದಾರೆ. ಬಾಬಾ ಮುಸ್ತ ಫಾನ ಚಿತ್ರವನ್ನು ಅಂದರೆ ಅಲೀಬಾಬಾನ ತಮ್ಮ ಖಾಸಿಮನ ಕೊಳೆತ ಶರೀರವನ್ನು ಹೊಲಿಯುವ ಚಮ್ಮಾರನ ಚಿತ್ರವನ್ನು ನೋಡಿದಾಗಲೆಲ್ಲಾ ನನಗೇನೋ ಒಂದು ಅನುಮಾನವಾಗುತ್ತಿತ್ತು. ಮುಸ್ತಾಫ ಚಮ್ಮಾರನಲ್ಲ, ನಮ್ಮ ಮನೆಯ ದರ್ಜಿ ಬಾಲಯ್ಯನೇ ಅವನ ವೇಷದಲ್ಲಿರಬೇಕೆಂದು. ನನ ಗೇಕೋ ಅನ್ನಿಸುತ್ತಿತ್ತು. ಅವನು ಬಹಳ ಲಂಚ ತಿಂದು ಕೆಲಸಕ್ಕೆ ಕೈಹಾಕಿದ್ದಾನೆಂದು ಅಂದುಕೊಳ್ಳುತ್ತಿದ್ದೆ. ಆಗ ಹಳೆಯ ಗಾದೆಯೊಂದು ನನಗೆ ನೆನಪಾಗುತ್ತಿತ್ತು. "ನೀವು ಬಿತ್ತಿದಂತೆ ಜೆಳೆಯುವಿರಿ' ಎಂಬುದೇ ಗಾದೆ... (As you sow you 1) Reap) ಚಿಕ್ಕವಯಸ್ಸಿ ನಲ್ಲಿ ನನಗೆ " Sow’ ದತ್ತು "5ಊ' ಎಂಬೆರಡು ಇಂಗ್ಲೀಷ್‌ ಸದಗಳ ಅರ್ಥ ಸರಿಯಾಗಿ ಆಗುತ್ತಿ ರಶಿಲ್ಲ. ಕಾರಣದಿಂದ «As you Sow you shall reap’ ಎಂಬ ಗಾಜಿ ನನ್ನ ಮಟ್ಟಿಗೆ ‘As you sew you shall 1€೩ap' ಎಂದಾಗಿತ್ತು. ಒಮ್ಮೊಮ್ಮೆ ಬಾಲಯ್ಯ ತೂಕಡಿಸುತ್ತಲೋ ಅಥವಾ ಅವ್ಫಿತನ್ಸಿಯೋ ಸೂಜಿಯಿಂದ ಕ್ಸ ಚುಚ್ಛಿಕೊಂಡರೆ ನಾನು "78೩! 18 what he has reaped’ ಎಂದುಕೆೊಳ್ಳು ತ್ತಿದೆ.”

ಸರೋಜಿನಿ ಓದಿದುದನ್ನು ಅಸಾಧಾರಣವಾಗಿ ಗೃಹಿಸುತ್ತಿದ್ದಳು. ತಂದೆ ಹುಟು ಉಪಾಧ್ಯಾಯರು. ಅಂಥವರಿಗೆ ಮಗಳೇ ಶಿಷ್ಯಳಾದಳು. ಅವಳನ್ನು ಹತ್ತಿರ ಕುಳ್ಳಿರಿಸಿಕೊಂಡು ವಿಜ್ಞಾನ ಹಾಗೂ ಪ್ರಕೃತಿಯ ಮೇಲೆ ಸರಳವಾದ ಪಾಠಗಳನ್ನು ಹೇಳುತ್ತಿ ದ್ಧ ರು, ಹೇಳಿದುದನ್ನು ಸುಲಭ ವಾಗಿ ಗಹಿಸುನ ಶಿಸ ರಿದ್ದ ಗುರುವಿಗೆಷು ಆನಂದ! ಸರೋಜಿನಿ ಸ್ಟೂ ಲಿಗೂ ಹೋಗುತ್ತಿ ದ್ದ ಳು. ಆದರೆ ಸ್ಫೂಲಿಗಿಂತ ಹೆಚ್ಚಾಗಿ ಮನೆಯಲ್ಲಿ ಕಲಿತದ್ದು ಅಪಾರ, ತರಗತಿಯಲ್ಲಿ ಆಕೆ ಮೊಟ್ಟ ಮೊದಲನೆಯವಳು. ಕಾರಣ ಆಕೆಯಲ್ಲಿ ದುರಹೆಂಕಾರನಿರಲಿಲ್ಲ; ನಮ್ರತೆಯಿತ್ತು. ಸಹಪಾಠಿ ಗಳು ಅಸೂಯೆಪಡುವುದಕ್ಕಿಂತ ಹೆಚ್ಚಾಗಿ ಆಕೆಯನ್ನು ಗೌರವದಿಂದ ಕಾಣು ತ್ರಿದ್ದರು, ಇಂಗ್ಲೆಂಡಿನ ಹೆಸರಾಂತ ಜಾನ್‌ಸನ್ನನಿಗೂ ಇದೇ ರೀತಿಯ ಗೌರವ ದೊರೆಯುತ್ತಿತ್ತಂತೆ.

೧೨ ಸರೋಜಿನಿದೇಖಿ

ಸರೋಜಿನಿಗೆ ಚಿಕ್ಕವಯಸ್ಸಿನಲ್ಲೇ ಇಂಗ್ಲೀಷು ಕಲಿಸುವ ಏರ್ಪಾಡು ನಡೆಯಿತು. ಮನೆಯಲ್ಲಿ ಭಾಷೆಗಳ ವೈವಿಧ್ಯ ತಾಂಡವಾಡುತ್ತಿತ್ತು. ವರದ ಸುಂದರಿ ಗಂಡನೊಡನೆ ಬಂಗಾಳಿಯಲ್ಲಿ ಮಾತನಾಡುತ್ತಿದ್ದಳು. ಮಕ್ಕ ಳೊಡನೆ ಹಿಂದೂಸ್ತಾನಿಯಲ್ಲಿ ಮಾತನಾಡುತ್ತಿದ್ದಳು. ಸೇವಕರೊಡಸನೆ ತೆಲುಗಿನಲ್ಲಿ ಮಾತನಾಡುತ್ತಿದ್ದಳು. ಆದರೆ ಮಕ್ನಳು ಮಾತ್ರ ಬಂಗಾಳೀ ಭಾಷೆಯಲ್ಲಿ ಮಾತನಾಡಕೂಡದೆಂದು ಅಘೋರನಾಥರ ಕಬ್ಬಾಜ್ಞಿಯಾ ಗಿತು. ಇಂಗ್ಲೀಷು ತಪ್ಪಿದರೆ ಹಿಂದೂಸಾ ನಿಯಲ್ಲಿ ಮಾತಾಡಬಹುದೆಂದು ಅವರು ಹೇಳಿದ್ದರು. ಸರೋಜಿನಿಯಾದರೋ ಇಂಗ್ಲೀಸಿನಲ್ಲಿ ಮಾತನಾಡು ತ್ರಿರಲಿಲ್ಲ. ಭಾಷೆಯಲ್ಲಿಯೇ ಮಾತನಾಡಬೇಕೆಂದು ಒತ್ತಾಯ ಪಡಿಸು ತಿದ್ದರು ತಂದೆ. ಆದರೆ ಸರೋಜಿನಿ ಭಾಷೆಯಲ್ಲಿ ಮಾತನಾಡುವುದಿಲ್ಲ ವೆಂದು ಹಠ ಹಿಡಿದು ಕುಳಿತಳು. ಹಠದ ಪರಿಣಾಮವನ್ನು ಆಕೆಯ ಲೇಖನಿಯಿಂದಲೇ ಕೇಳಿ: “ನಾನು ಭಾಷೆಯನ್ನು ಮಾತಾಡುವುದಿಲ್ಲವೆಂದು ಹಠ ಹಿಡಿದೆ. ಒಂದು ದಿನ--ಆಗ ನನಗೆ ಒಂಬತ್ತು ವರ್ಜಿ- -ಅದಕ್ಕಾಗಿ ನನ್ನನ್ನು ಶಿಕ್ಷಿಸಿದರು. ನನಗೆ ಶಿಕ್ಸೆಯಾದದ್ದು ಅದೇ ಮೊದಲನೆಯ ಸಲ. ಇಡೀ ದಿನವೆಲ್ಲ ನನ್ನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿದರು. ಕೋಣೆ ಯಿಂದ ನಾನು ಪೊರ್ತ ಅರಳಿದ ಭಾಷಾಪಂಡಿತಳಾಗಿ ಹೊರಬಿದ್ದೆ. ಅಂದಿ ನಿಂದ ನಾನು ತಂದೆಯೊಡನೆ ಇಂಗ್ಲೀಷು ಬಿಟ್ಟು ಬೇರೊಂದು ಮಾತಾಡೆ ಲಿಲ್ಲ. ಯಾವಾಗಲೂ ನನ್ನೊಡನೆ ಹಿಂದುಸಾನಿಯಲ್ಲಿ ಮಾತಾಡುವ ತಾಯಿಯೊಡನೆಯೂ ನಾನು ಇಂಗ್ಲೀಷಲ್ಲದೆ ಬೇರೆ ಮಾತಾಡುತ್ತಿರಲಿಲ್ಲ.”

ಚಿಕ್ಕ ಹುಡುಗಿಯಾದ ನನಗೆ ಕವಿಕೆಗಳನ್ನು ರಚಿಸುವುದರಲ್ಲಿ ವಿಶೇಷ ಗೀಳು ಇದ್ದಂತೆ ಕಾಣಲಿಲ್ಲ. ಆದರೆ ಕಲ್ಪನೆಯ ಲೋಕದಲ್ಲಿ ಕನಸುಕಾಣುವ ಸ್ವಭಾವವೇನೋ ಇತ್ತು. ತಂದೆಯ ನೇತೃತ್ವದಲ್ಲಿ ನನ್ನ ಶಿಕ್ಷಣ ಕಟ್ಟು ನಿಬ್ಬಾದ ವೈಜ್ಞಾನಿಕ ರೀತಿಯಲ್ಲೇ ನಡೆಯಿತು. ನಾನೊಬ್ಬ ಗಣಿತ ಶಾಸ್ತ್ರಜ್ಞಳೋ ಅಥವಾ ವೈಜ್ಞಾನಿಕಳೋ ಆಗಬೇಕೆಂದು ನನ್ನ ತಂದೆಯ ನಿರ್ಧಾರವಾಗಿತ್ತು. ಆದರೆ ನನ್ನ ತಂದೆಯಿಂದಲೂ, ಬಂಗಾಳೀ ಭಾಷೆ ಯಲ್ಲಿ ಹಾಡುಗಳನ್ನು ಕಟ್ಟುತ್ತಿದ್ದ ನನ್ನ ತಾಯಿಯಿಂದಲೂ ನಾನು ಪಡೆದ ಕನಿತಾ ಕೌಶಲ ನನ್ನ ತಂದೆಯ ನಿರ್ಧಾರವನ್ನು ಮಾರಿಸಿತು. ಒಂದು ದಿನ ನಾನು ಆಲ್ಲಿಬ್ರ (Algebra) ಲೆಕ್ಕವನ್ನು ಮಾಡಲಾರದೆ ನಿಟ್ಟುಸಿರು ಬಿಡು

ಬಾಲ್ಯ ಮತ್ತು ವಿದ್ಯಾಭ್ಮಾಸ ೧ಕ್ಬಿ

ತ್ರಿದ್ದೆ. ಏನೇ ಮಾಡಿದರೂ ಲೆಕ್ಸ ಸರಿಯಾಗಲೊಲ್ಲದು. ಅದರ ಬದಲು ಇಡೀ ಪದ್ಯವೊಂದು ನನ್ನ ಬಾಯಿಂದ ಹೊರಟಿತು. ಅದನ್ನು ಬರೆದುಕೊಂಡೆ.

ಅಂದಿನಿಂದ ನನ್ನ « ಕನಿತಾ ಜೀವನ? ಪ್ರಾರಂಭವಾಯಿತು. ಹದಿ ಮೂರನೇ ವಯಸ್ಸಿನಲ್ಲಿ ನಾನೊಂದು ನೀಳ ವನನನ್ನು ಬರೆದೆ... ಅದರೆ ಹೆಸರು " ಸರೋವರ ಸುಕನ್ಮೆ? ಎಂದು. ಅದರಲ್ಲಿ ೧೪೦೦ ಸಾಲುಗಳಿದ್ದು ವು. ಬರೆಯಲು ಆರು ದಿನಗಳಾದುವು. ಅದೇ ವಯಸ್ಸಿನಲ್ಲಿ ೨೦೦೦ ಸಾಲುಗಳ ನಾಟಕವೊಂದನ್ನು ಬರಿದೆ. ಡಾಕ್ಟರು ನನಗೆ ಬಹಳ ಕಾಯಿಲೆಯೆಂದೂ, ಆದಕಾರಣ ನಾನು ಪುಸ್ತಕವನ್ನು ಮುಟ್ಟಿ ಕೂಡದೆಂದೂ ಹೇಳಿದ್ದರು. ಡಾಕ್ಟರ ಮೇಲಿನ ಸೇಡನ್ನು ತೀರಿಸಿಕೊಳ್ಳ ಬೇಕೆಂದೇ ನಾನು ಅದೇ ಕ್ಷಣ ಹಿಂದುಮುಂದು ನೋಡದೆ ನನ್ನ ನಾಟಕವನ್ನು ಪ್ರಾರಂಭಿಸಿದೆ. ಸುಮಾರು ಆವೇಳೆಗೆ ನನ್ನ ಆರೋಗ್ಯ ನಿಜವಾಗಿಯೂ ಕೆಟ್ಟಿತು. ನಿತ್ಯದ ಪಾಠ ಪ್ರವಚನಗಳು ನಿಂತುಹೋದವು. ಅವಕಾಶವನ್ನು ಪಯೋಗಿಸಿಕೊಂಡು ಅಪಾರ ಗ್ರಂಥಗಳನ್ನು ಅತ್ಯಾಸಕ್ತಿಯಿಂದ ಓದಿಬಿಟ್ಟಿ. ನನ್ನ ಬಹುಭಾಗದ ಗೃಂಥಸಠಣೆಯೆಲ್ಲ ನನ್ನ ಹದಿನಾಲ್ಬರಿಂದ ಹದಿನಾರು ವರ್ಷ ವಯಸ್ಸಿ ನೊಳಗಾಯಿತೆಂದು ನನ್ನ ಭಾವನೆ. ಸಮಯದಲ್ಲಿ ಒಂದು ಕಾದಂಬರಿ ಬರೆದೆ. ದೊಡ್ಡ ದೊಡ್ಡ ಪುಸ್ತ ಕಗಳಾಗುವಷ್ಟು ದಿನಚರಿ ಬರೆಯುತ್ತಿದ್ದೆ. ನನ್ನ ವಿಚಾರದಲ್ಲಿ ನಾನು ಗಂಭೀರ ಆಸಕೆ ವಹಿಸಿದೆ.”

ಸರೋಜಿನಿ ದೊಡ್ಡೆ ವಳಾದಳು. ಆಕೆಗೆ ಸರ್ಸಿಯನ್‌ ಭಾಷೆ ಕಲಿಸಲು ತಂದೆ ಒಬ್ಬ ಪರ್ಷಿಯನ್‌ ಉಪಾಧ್ಯಾಯರನ್ನು ನೇಮಿಸಿದರು. ಸ್ಕೂಲಿ ನಲ್ಲಿಯೂ ಆಕೆಯ ದ್ವಿತೀಯ ಭಾಷೆ ಪರ್ಷಿಯನ್‌ ಆಗಿತ್ತು.

ಮಗಳನ್ನು ಹೈ ಸ್ಫೂ ಲಿಗೆ ಕಳುಹಿಸಬೇಕೆಂದು ಅಘೋರನಾಥರ ಆಸೆ ಯಾಗಿತ್ತು. 'ಕಾಲದಲ್ಲಿ ಹೆಣು ಮಕ್ಕಳು ಹೈಸ್ಟೂ ಸೂಲಿಗೆ ಹೋಗು ತ್ರಿ ರಲಿಲ್ಲ. ಅಲ್ಲದೆ ಹೈ ದರಾಬಾದಿನಲ್ಲಿ ಸರಿಯಾದ ಹೈಸ್ಸಲೂ ಇರಲಿಲ್ಲ. ಸರಿಯಾದ ಹೈ ಸ್ಫಲಿದ್ದುದು ಮದರಾಸಿನಲ್ಲಿ. ಆದರೆ ಅಲ್ಲಿಗೆ ಕಳುಹಿಸು ವುದೂ ಆಕ್ಸೇಪಕರವಾಗಿತ್ತು. ಮೇಲಾಗಿ ತಮ್ಮ ಮುದ್ದು ಮಗಳನ್ನು ಹೇಗೆ ಅಗಲುವುಡೆಂದು ತಂದೆತಾಯಿಗಳ ಯೋಚನೆಯಾಗಿತ್ತು. ಆದರೂ ದ್ಸೈ ರ್ಯಮಾಡಿ ತಂದೆತಾಯಿಗಳು ಮಗಳನ್ನು ಮದ್ರಾಸಿಗೆ ಕಳುಹಿಸಿ ಕೊಟ್ಟ ರು, ಸರೋಜಿನಿಗೆ ಆಗ ಕೇವಲ ಹೆತ್ತು ತೆ ಮುಸ್ಲಿ ಹುಡುಗಿ

೧೪ ಸರೋಜಿನಿದೇವಿ

ನೂರಾರು ಮೈಲಿಗಳಾಚೆಯಿದ್ದ ಮದ್ರಾಸಿಗೆ ಹೋಗಿ ಹೈಸ್ಫೂಲು ಸೇರಿ ಕೊಂಡಳು, ಹೆನ್ನೆರಡನೇ ವರ್ಷದಲ್ಲಿ ಆಕೆ ಮೆಟ್ರಿಕ್ಕುಲೇಟ್‌ ಪರೀಕ್ಷೆ ಪಾಸು ಮಾಡಿದಳು. ಅದು ಸಾಮಾನ್ಯ ರೀತಿಯ ಪಾಸಾಗಿರಲಿಲ್ಲ. ಪರೀಕ್ಷೆಯೂ ಈಗಿನಷ್ಟು ಸುಲಭವಾಗಿರಲಿಲ್ಲ. ಆಗಿನ ಪರೀಕ್ಷೆ. ಯಲ್ಲಿ ಕೊಡುತ್ತಿ ದ್ದ ಪ್ರಶ್ನೆ ಗಳಿಗೆ ಉತ್ತರ ಕೊಡಲು ಈಗಿನ ಬಿ. ಎ. ವಿದ್ಯಾರ್ಥಿಗಳ ಛೂ ತಡಬಡಿಸ ಜಿತು. ಅಷ್ಟೊಂದು ಕಷ್ಟವಾಗಿತ್ತು ಪರೀಕ್ಷೆ. ಇಂತಹ ಪರೀಕ್ಷೆಯಲ್ಲಿ ಸರೋಜಿನಿ ಮೊದಲನೆಯವಳಾಗಿ ಬಂದಳು! ಪರೀಕ್ಷೆ ಮುಗಿಸಿ ಪ್ರಥಮಸ್ಥಾನ ಪಡೆದು ಮನೆಗೆ ಬಂದ ಸರೋಜಿನಿ ಯನ್ನು ಕಾ ಮಾತಾಏತೃಗಳಿಗೆ" ನಿಜವಾಗಿಯೊ ಸಂತೋಷವಾಯಿತು. aad ಮಗಳನ್ನು ಪಡೆದದ್ದು ತಮ್ಮ ಭಾಗ್ಯ ವೆಂದುಕೊಂಡರು. ಆದರೆ ತಂದೆ ಮಾತ್ರ ಮಗಳಲ್ಲಿ ಟೀ ಮೂಡದಂತೆ ನೋಡಿಕೊಂಡರು. ಅನೇಕ ಕಡೆಗಳಿಂದ ಜನರು ಬಂದು ಅಘೋರನಾಥರ ಮಗಳನ್ನು ಅಭಿ ನಂದಿಸಿದರು. ಅಭಿನಂದನೆ ಮುಗಿದಮೇಲೆ ತಂದೆ ಮಗಳನ್ನು ಪಕ್ಕಕ್ಕೆ ಕರೆದು ಹೀಗೆ ಹೇಳಿದರು: ಮಗೂ ಸರೋಜ, ನೀನು ಪರೀಕ್ಷೆ ಯಲ್ಲಿ ಪ್ರಥಮಸ್ಸಾ ಪಡೆದಿರುವೆ ನಿಜ. ಆದರೆ ಅದರಲ್ಲಿ ಆಶ್ಚರ್ಯವೇನಿದೆ? ಸಾಸು ಆಗಲೇ ನಿರೀಕ್ಷಿಸಿದ್ದೆ. ನೀನು ಮೊದಲನೆಯವಳಾಗಿ ಬರದಿದ್ದರೆ ನನಗೆ ಆಶ ಶ್ಚರ್ಯವಾಗುತ್ತಿತ್ತು. ಹೋಗು |? ಫಟ್ಟ ಕ್ಕು ಕೇಸನ್‌ ಮುಗಿಸಿದಮೇಲೆ ಸರೋಜಿನಿ ಕಾಲೇಜಿಗೆ ಹೋಗ ಬಹುದಾಗಿತ್ತು. ಆದರೆ ಹೋಗಲಿಲ್ಲ. ಆರೋಗ್ಯ ಸರಿಯಾಗಿರಲಿಲ್ಲ. ಬಹು ನಿಶ್ರಕ್ಷಳಾದಕಾರಣ ಸಂ ಪೂರ್ಣ ವಿಶ್ರಾಂತಿಬೇಕೆಂದು ಡಾಕ್ಟರು ಹೇಳಿದರು. ಶರೀರಕ್ಭಾಗಲೀ ಬುದ್ಧಿ ಗಾಗಲೀ ಹೆಚ್ಚು ಶ್ರಮ ಕೊಡಬಾರದೆಂದು ಸಲಹೆ ಮಾಡಿದ್ದರು. ಆದರೆ ಸಲಹೆಯನ್ನು ಮೀರಿ ಸರೋಜಿನಿ ಮಾಡಿದ ಲಸವನ್ನು ಮೇಲಾಗಲೇ ಹೇಳಿದೆ. ಹದಿನಾಲ್ಕು ವರುಷಗಳು ಮುಗಿಯು ವುದರೊಳಗೆ ಆಕೆ ಹೆಚ್ಚು ಕಡಮೆ ಎಲ್ಲಾ ಇಂಗ್ಲೀಷು ಕವಿಗಳ ಗ್ರಂಥ ಗಳನ್ನು ಓದಿ ಮುಗಿಸಿದ್ದಳು. ಆಕೆಗೆ ಪ್ರಿಯವಾದ ಕವಿಗಳೆಂದರೆ ಸೆಲ್ಪಿ, ಟಿನ್ನಿಸನ್‌ ಮತ್ತು ಬ್ರೌನಿಂಗ್‌. ಅಸ್ಟೇ ಅನ್ನದೆ ಆಕೆಗೆ ತತ್ವ ಶಾಸ್ತ್ರ, ಇತಿಹಾಸ ಮುಂತಾದ ವಿಷಯಗಳ ಮೇಲೂ ಹೆಚ್ಚು ಆಸಕ್ಕಿ. ತಡಿಯ ಪುಸ್ತಕ ಭಂಡಾರದಲ್ಲಿದ್ದ ಪುಸ್ತಕಗಳು ಆಕೆಗೆ ಸಾಲಲಿಲ್ಲ. ಹೊರಗಿನಿಂದ ಎರವು

ಬಾಲ್ಯ ಮತ್ತು ವಿದ್ಯಾ ಭ್ಯಾಸ ೧೫

ತರಿಸಿಕೊಂಡು ಓದಿದಳು. ಕೊನೆಗೆ ಕೊಂಡುಕೊಂಡು ಓದಿದಳು.

ವಯಸ್ಸಾ ದಂತೆ ಬುದಿ ಯೂ ವಿಕಾಸಗೊಂಡಿತು. ಆಕೆಯ ಮನಸ್ಸು ಕನಿತೆಯಕಡೆ ಧಾಲುತ್ತಿದು ದು ಸ್ಪಷ್ಟ ವಾಗುತ್ತಿತ್ತು. ಕವಿಹೈದಯ ಅರಳಿ ಹೊರಸೂಸಲು ಚಡಸಡಿಸುತ್ತಿತ್ತು. ಅದು ಹೇಗೆ "ಹೊರಹೊಮ್ಮಿತೈೆ ಬು ದನ್ನು ಆಕೆಯ ಮಾತಿನಿಂದಲೇ ಕೇಳಿದ್ದೀರಿ. ಆಲ್‌ಜಿಬ್ರಾ ಲೆಕ್ಟಮಾಡಲು ಹೋಗಿ ಅದರ ಬದಲು ಕವಿತೆ ಮಾಡಿದಳು ಸರೋಜಿನಿ. ಆದರೆ ಆಲ್‌ ಜಿಬ್ರ ಲೆಕ್ಸ ಬರದವರಿಗೆಲ್ಲ ಕವಿತೆ ಬರುವುದಿಲ್ಲ... ಕವಿತೆ ಸರೋಜಿನಿಗೆ ದೈವದತ್ತವಾಗಿ ಬಂದ ಪ್ರತಿಭೆ. ಕವಿಗಳು ಹುಟ್ಟುತ್ತಾರೆ, ; ಅವರನ್ನು ಸ್ಪಷ್ಟ ಮಾಡಲಾಗುವುದಿಲ್ಲ ಎಂದು ಇಂಗ್ಲೀಹಿನಲ್ಲಿ ನಾಣ್ನು ಡಿ ಇದೆಯಸ್ಸೆ.. ಅದಕ್ಕೆ ತಕ್ಕ ತೆ ಸರೋಜಿನಿಯೂ ಹುಟ್ಟು ಕನಿಯೇ ಹೊರತು ಕಟ್ಟು ಕವಿ ದಕ ಸರೋಜಿನಿಯ ತಮ್ಮ ಹೆರೀಂದ್ರ ನಾಥರು ಕವಿಗಳನ್ನು ಕಟ್ಟಲು ಸಾಧ್ಯವೇ ಹೊರತು ಹುಟ್ಟಿಸಲು ಸಾಧ್ಯ ನಲ ಎಂದು ಹೇಳಿ ಇಡ! ಸಾರಸ್ವತ ಸಿದ್ಧಾಂತವನ್ನು ಬುಡಮೇಲು ಮಾಡಿಬಿಟ್ಟರು. ಅನರು ತಮ್ಮ ವಾದವನ್ನು ಪುಷ್ಟೀಕರಿಸಲು ಒಂದು ಸ್ವಾರಸ್ಯವಾದ ಪ್ರಸಂಗವನ್ನು ಹೇಳಿ ದ್ಹಾರೆ. ಒಬ್ಬ ಜಂಭದ ಕವಿಯಿದ್ದ. ಅವನು ತಾನು ಬರೆದ ಕವಿಕೆಗಳನ್ನು ಅಚ್ಚು ಹಾಕಿಸಬೇಕಂದು ಯಾರಾರಿಗೋ ಕಳುಹಿಸಿದ. ಆದರೆ ಯಾರೂ ಒಪ್ಪ ಲಿಲ್ಲ. ಅವನು ರೇಗಾಡಿ ಪ್ರಕಾಶಕರೊಬ್ಬರಿಗೆ ಕಾಗದ ಬರೆದ: ನಿಮಗೆ ಗೊತ್ತಿಲ್ಲವೇ ನಾನು ಹುಟ್ಟು ಕವಿಯೆಂದು?” ಎಂದು. ಪ್ರಕಾಶಕರು ಚಾಕಚಕ್ಯ್ಕತೆಯನ್ನುಪಯೋಗಿಸಿ ಬಹಳ ಸೌಮ್ಯವಾಗಿ ಉತ್ತರಕೊಟ್ಲರು : " ನೀವು ಹೇಳಿದ್ದು ಅರ್ಥವಾಯಿತು. ಆದರೆ ನಿಮ್ಮ ತಪ್ಪ ನ್ನು ನಿಮ್ಮ ತಂದೆ ತಾಯಿಗಳ ಮೇಲೆ ಹೊರಿಸಬೇಡಿ.

ಸರೋಜಿನಿ ಒಂದು ನಾಟಕವನ್ನು ಬರೆದಳೆಂದು ಮೇಲೆ ಹೇಳಿದೆ ಯಪ್ಪೆ" ಇಂಗ್ಲಿಷ್‌ ಭಾಷೆಯಲ್ಲಿದ್ದ ನಾಟಿಕವನ್ನು ಪರ್ಷಿಯನ್‌ ಭಾಷೆಗೆ ಪರಿವರ್ತಿಸಿದ್ದಳು. ಅದರ ಹೆಸರು « ಮೆಹೆರ್‌ ಮುನೀರ್‌ ಎಂದು. ಮಗಳ ಸಾಹಿತ್ಯ ಕಲೆಯನ್ನು ಪ್ರ್ರೋತ್ಸಾ ಹಿಸಬೇಕೆಂದು ಉದ್ದೆ ಶಿಸಿ ಅಘೋರ ನಾಥರು ನಾಟಕವನ್ನು ಸ್ಪಳೀಯ ಮುದ್ರ ಣಾಲಯಪೊಂದರಲ್ಲ ಅಚ್ಚು ಹಾಕಿಸಿ ತಮ್ಮ ಸ್ನಹಿತರಿಗೆಲ್ಲ ಹಂಚಿದರು” ಮಕ್ಕಳಲ್ಲಿ ಕಂಡುಬರುವ

ಅಮೂಲ್ಯ ಕರೆಯನ್ನು ಅಭಿವೃದ್ಧಿ ಮಾಡಲು ಅವರು ಹಿಂದುಮುಂದು

೧೬ ಸರೋಜಿನಿದೇವಿ

ನೋಡುತ್ತಿರಲಿಲ್ಲ... ಸರೋಜಿನಿಯ ತಮ್ಮ ಹರೀಂದ್ರ ಆರು ವರ್ಷದ ಮಗುವಾಗಿದ್ದಾಗಲೇ ಕನನ ಕಟ್ಟುತ್ತಿದ್ದ ನಂತೆ. ಮಗನ ಪ್ರಯತ್ನ ನನ್ನು ತಂದಿ ಪ್ರೋೋತ್ಸಾಹಿಸದೇ ಹೋಗಿದ್ದರೆ, ಬರೆದದ್ದು ಕಸನೆಂದು ಅನರು ಅಂದಿದ್ದರೆ, ಹರೀೀಂದ್ರ ಸರ್ಕಾರಿ ಆಫೀಸಿನಲ್ಲಿ ಗುಮಾಸ್ತ ನೋ ಅಥವ ಸೇರು ಮಾರ್ಕೆಟ್ಟಿನಲ್ಲಿ ಕಿರಿಚಿಕೊಳ್ಳುವ ವರ್ತಕನೋ ಆಗಬೇಕಾಗಿತ್ತೆಂದು ಅವರೇ ಹೇಳಿಕೊಂಡಿದ್ದಾರೆ.

೪. ನಿದೇಶಗಮನ

ಸರೋಜಿನಿಯ ನಾಟಿಕದ ಪ್ರತಿಯೊಂದನ್ನು ಆಫೋರವಾಥರು ನೈಜಾಮರಿಗೂ ಕಳುಹಿಸಿಕೊಟ್ಟರು. ಇದು ನಡೆದದ್ದು ೧೮೯೫ ರಲ್ಲಿ. ಆಗ ಸರೋಜಿನಿಗೆ ಹದಿನಾರು ವರ್ಷ. ನಾಟಕವನ್ನು ಓದಿ ನೈಜಾಮರು ತುಂಬಾ ಸಂತೋಷಸಟ್ಟರು. ಆಕೆಯ ಕವಿತಾ ಪ್ರತಿಭೆಯನ್ನು ಅವ ರಾಗವೇ ಕೇಳಿದೆ ರು. ಪ್ರತಿಭೆಗೆ ತಕ್ಕ ಪೊ ತ್ಸಾಹೆಕೊಡುವುದು ಸೂಕ್ತವೆಂದು ಅವರು ಭಾವಿಸಿದರು. ಅಘೋರನಾಥರಿಗೆ ಒಂದು ದಿನ ಹೇಳಿಕಳುಹಿಸಿದರು. ರಾಜಾಜ್ಞೆ ಏನಿರಬಹುದೆಂದು ಊಹಿಸಲಾರದ ಅಘೋರನಾಥರು ಹೆದರಿಕೊಂಡೇ ಹೋದರು ರಾಜಸಮ್ಮುಖಕೆ, ಆದರೆ ಸರೋಜಿನಿಯ ಮಾತೆತ್ತಿದಾಗ ಅವರಿಗೆ ಧೈರ್ಯ ಬಂದಿತು. ಮಗಳಿಗೆ ಸಹಾಯ ಮಾಡುವುದರಲ್ಲಿ ತಂದೆಯ ಒಪ್ಪಿಗೆ ಇಪಿಯೇ ಎಂದು ಕೇಳಿದರು. ಅಘೋರನಾಥರು ಅನಿವಾರ್ಯವಾಗಿ ಒಫ್ಟಿಕೊಳ್ಳ ಬೇಕಾಯಿತು. ಮಕ್ಸಳ ಏಳಿಗೆಯಲ್ಲಿ ಯಾವುದಕ್ಕೂ ಅವರು ಅಡ್ಡಿ ಬರುತ್ತಿರಲಿಲ್ಲ. ಇದರ ಪರಿಣಾಮ ವಾಗಿ ೧೮೯೫ ನೇ ಇಸವಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸರೋಜಿನಿ ವರ್ಷಕ್ಕೆ ಮುನ್ನೂರು ಪೌಂಡಿನ ವಿದೇಶೀ ಸ್ಟಾಲರ್‌ಹಿಸ್‌ ಪಡೆದು ಹಡಗೇರಿ ಇಂಗೆ ಂಡಿಗೆ ಹೊರಟಳು. ಹದಿನಾರು ವರ್ಷದ ಹುಡುಗಿ ಆರು ಸಾವಿರ ಮೈಲಿಗಳಾಜೆ ಇರುವ ಪರಪೇಶಕ್ಸೆ ಧೈರ್ಯದಿಂದ ಹೊರಟಳು, ಅಘೋರ ನಾಥರ ಹಳೆಯ ಸ್ನೇಹಿತರೊಬ್ಬರು ಇಂಗ್ಲೆಂಡಿಗೆ ಹೋಗುತ್ತಿದ್ದರು. ಅವರ ಜೊತೆ ಸರೋಜಿನಿಯೂ ಹಡಗಿನಲ್ಲಿ ಪ್ರಯಾಣ ಮಾಡಿದಳು. ಹಲವಾರು ದಿನ ಸೃಯಾಣಮಾಡಿ ಸರೋಜಿನಿ ಇಂಗ್ಲೆಂಡ್‌ ಮುಟ್ಟಿದಳು. ಅಲ್ಲಿ ಮಿಸ್‌ ಮ್ಯಾಸ್ಸಿಂಗ್‌ ಎಂಬ ಹೆಸರಾಂತ ಮಹಿಳೆ ಇದ್ದಳು. ಅವಳು ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಬಹಳ ಕೆಲಸ ಮಾಡಿದ್ದಳು. ಅವಳ ಆಶ್ರಯದಲ್ಲಿ ಸರೋಜಿನಿ ನೆಲೆಸಿದಳು. ಇದೊಂದು ಭಾಗ್ಯವಾಗಿಯೇ ಪರಿಣಮಿಸಿತು. ಏಕೆಂದರೆ ಮ್ಯಾನ್ಸಿಂಗಳ ಮನೆಗೆ ಇಂಗ್ಲೆಂಡಿನ ಹೆಸರಾಗಿದ್ದ ಸಾಹಿತಿಗಳೆಲ್ಲ ಬರುತ್ತಿದ್ದ ರು. ಸಮಾಜ ದಲ್ಲಿ ಗಣ್ಯರಾದ ವ್ಯಕ್ತಿಗಳೂ ಬರುತ್ತಿದ್ದರು. ಮನೆಯಲ್ಲಿಯೇ ಮೊಟ್ಟ

14

೧೮ ಸರೋಜಿನಿದೇವಿ

ಮೊದಲನೆಯ ಬಾರಿಗೆ ಸರೋಜಿನಿಗೆ ಎಡ್ಮಂಡ್‌ ಗಾಸೆಯವರ (Edmund Gosse) ಪರಿಚಯವಾದದ್ದು. ಪ್ರಸಿದ್ಧ ನಾಟಿಕ ವಿಮರ್ಶಕ ವಿಲಿಯಂ ಆರ್ಡರ್‌ ಮತ್ತು ಸರೋಜಿನಿಯ ಪುಸ್ತಕಗಳನ್ನು ಅನಂತರ ಪ್ರಕಟಿಸಿದ ಹೈನೇಮನ್‌ (Heinemann) ಇವರ ಸರಿಚ ಯಮವಾದದ್ದು ಇಲ್ಲಿಯೇ, ಸರಿಯಾದ ಆಶ್ರಯ ಸಿಕ್ಕಿದ ನಂತರ ಕಾನೇಜಿಗೆ ಸೇರಬೇಕೆಂದು ಸರೋಜಿನಿ ಆಲೋಚನೆ ಮಾಡಿದಳು. ಕೇಂಬ್ರಿಡ್ಸ್‌ ವಿಶ್ವವಿದ್ಯಾನಿಲಯ ವನ್ನು ಸೇರಬೇಕೆಂದು ತೀರ್ಮಾನವಾಯಿತು. ಆದರೆ ನಿಶ್ಚವಿದ್ಯಾನಿಲ ಯಕ್ಕೆ ಹದಿನೆಂಟು ವರ್ಷಗಳಿಗಿಂತ ಕಡವೆ: ವಯಸ್ಸಿನನರಿಗೆ ಪ್ರವೇಶ ದೊರೆ ಯುತ್ತಿ ರಲಿಲ್ಲ. ಸರೋಜಿನಿಗೆ ಇನ್ನೂ ಹದಿನಾರು ವರ್ಷಗಳು. ಅಂದ ಮೇಲೆ ಅದನ್ನು ಸೇರುವುದು ಕೂಡರೇ ಸಾಧ್ಯವಾಗಲಿಲ್ಲ ಆದ್ದರಿಂದ ಅಲ್ಲಿಯವರೆಗೆ ಲಂಡನ್ಸಿನಲ್ಲಿದ್ದ ಕಿಂಗ್ಸ್‌ ಕಾಲೇಜಿನಲ್ಲಿ (Kings College) ಜರುಗುತ್ತಿದ್ದ ಉಪನ್ಯಾಸಗಳನ್ನು ಕೇಳುವುದಕ್ಕೆ ಹೋಗುತ್ತಿದ್ದಳು. ವಯಸ್ಸು ಹದಿನೆಂಟಾದಾಗ ಆಕೆಗೆ ಕೇಂಬ್ರಿಡ್ಲಿನ ಗಿರ್ಟಿನ್‌ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಆದರೆ ವಿಶ್ವವಿದ್ಯಾನಿಲಯದ ಜೀವನ ಸರೋಜಿನಿಗೆ ಸರಿಬೀಳಲಿಲ್ಲ. ಶಿಸ್ತು ಹಾಗೂ ಚಾಚೂತಪ್ಪದೆ ನಡೆಸಬೇಕಾದ ದಿನ ಚರಿಯ ಕೆಲಸ ಅವಳಿಗೆ ಒಗ್ಗಲಿಲ್ಲ. ಅನೇಕ ನಿಯಮಗಳನ್ನು ಆಕೆ ಯಂತ್ರ ದಂತೆ ಪಾಲಿಸಬೇಕಾಗಿತ್ತು. ಆದರೆ ಆಕೆಯ ಮನಸ್ಸು ಲೀಲಾಜಾಲವಾಗಿ ವಿಹೆರಿಸಬೇಕೆಂದು ಅಶಿಸುತ್ತಿತ್ತು. ಹಾಗೆ ಕಾಲ ಕಳೆಯುತ್ತ ಕವಿತೆಗಳನ್ನು ರಚಿಸಬೇಕೆಂದು ಅನ್ನಿಸುತ್ತಿತ್ತು. ವಾಸ್ತವವಾಗಿ ಆಕೆ ಆಗಲೇ ಕವಿಕೆಗಳ ರಚನೆಯಲ್ಲಿ ತೊಡಗಿದ್ದಳು. ಇದನ್ನು ನೋಡಿಯೇ ಕೇಂಬ್ರಿಡ್‌ ನಲ್ಲಿದ್ದ ಆಕೆಯ ಸಮಕಾಲೀನರೊಬ್ಬರು ಹೇಳಿದರು: “ಇಲ್ಲಿ ಭಾರತದ ಪುಟ ಹುಡುಗಿಯೊಬ ಳಿದ್ದಾಳೆ. ಅವಳಿಗೆ ಕವಿತೆಯನ್ನು ಕಟ್ಟುವುದಲ್ಲದೆ ಬೇರೊಂದು ಕೆಲಸವಿಲ್ಲ.” ಎಂದು. ಸರೋಜಿನಿ ಕೇಂಬ್ರಿಡ್‌ ಗೆ ಸೇರಿದ ಹಲವೇ ತಿಂಗಳಲ್ಲಿ ಆಕೆಯ ಆರೋಗ್ಯ ಕೆಟ್ಟಿತು, ಅದರಿಂದಾಗಿ ಆಕೆಯ ನಿದ್ಯಾಭ್ಯಾಸವೂ ಅಲ್ಲಿಗೇ ಮುಗಿಯಿತು. ೧೮೯೭ ರಲ್ಲಿ ಆಕೆ ಆರೋಗ್ಯಸುಧಾರಣೆಗೋಸ್ಟರ ಸಿಟಿ ರ್‌ಲ್ಯಾಂಡ್‌ ಮತ್ತು ಇಟಲಿ ದೇಶಗಳಿಗೆ ಹೋದಳು. ಸ್ವಿಟಿ ರ್‌ಲ್ಯಾಂಡಿನ ಪರ್ವತ ಕಂದರ ಗಳನ್ನೂ ರಮ್ಯ ಸರೋವರಗಳನ್ನೂ ಯಾವಾಗಲೂ ಸೌಂದರ್ಯದಿಂದ

ವಿದೇಶಗಮನ ೧೯

ಕೂಡಿರುವ ಕಾಡುಗಳನ್ನೂ ನೋಡಿ ಆಕೆಯ ಮೆನಸ್ಸು ಸೂರೆಹೋಯಿತು. ಇಟಲಿದೇಶದ ಪೂರ್ವೇತಿಹಾಸ ಹಾಗೂ ಅಲ್ಲಿಯ ಸೌಂದರ್ಯಸ್ಥಳಗಳು ಆಕೆಯಲ್ಲಿ ಸುಷುಪ್ತವಾಗಿದ್ದ ಭಾವನೆಗಳನ್ನು ಜೇತನಗೊಳಿಸಿದುವು. ಹದಿ ನಾಲ್ಕು ಹದಿನೈದು ಹದಿನಾರನೇ ಶತಮಾನಗಳಲ್ಲಿ ಯೂರೋಪುಖಂಡ ದಲ್ಲಾದ ಸಾಹಿತ್ಯ ಹಾಗೂ ಕಲೆಯ ಪುನರುಜ್ಜೀವನಕ್ಕೆ (Renaissance) ಇಟಲೀದೇಶ ಮಾತೃ ಸ್ಥಾನವಾಗಿತ್ತು. ದಾಂತೆಯ (Dante) ಜನ್ಮಭೂಮಿ ಇಟಲಿ. ರಾಫೆಲ್‌ (Raphae])ಮತ್ತು ಮೈಕೇಲ್‌ ಆಂಜಲೊ (Michael Aಗಜ್ರೀlಂ)ಅನರಂತಹೆ ಮಹಾಪುರುಷರ ಮನೆ ಇಟಲಿ, ಮಜಿನಿ(Mazzini) ಮತ್ತು ಗರಿಬಾಲ್ಲಿ (ಆ೩r1baldi) ಯರಂತಹ ಮಹಾವ್ಯ ಕ್ಲಿ ಗಳನ್ನು ಸೃಷ್ಟಿ ಸಿದ ನಾಡು ಇಟಲಿ. ಇಂತಹೆ ವೈಭವದ ಇತಿಹಾಸ ಪರಂಪರೆಯ ಕಾರಣ ದಿಂದ ಇಟಿಲಿ ಸರೋಜಿನಿಯ ಮನಸ್ಸಿನಮೇಲೆ ಮಹೆತ್ಸರಿಣಾನುವನ್ನುಂಟು ಮಾಡಿತು.

ಹೆಲವಾರು ತಿಂಗಳುಗಳು ಇಟಲಿ ಮತ್ತು ಸಿಟಿ ರ್‌ಲ್ಯಾಂಡಿನಲ್ಲಿದ್ದು ಆರೋಗ್ಯ ಸುಧಾರಿಸಿಕೊಂದು ಸರೋಜಿನಿ ಇಂಗ್ಲೆಂಡಿಗೆ ಹಿಂದಿರುಗಿದಳು. ಆದರೆ ಓದನ್ನು ಮುಂದುವರಿಸುವ ಮನಸ್ಸು ಮಾತ್ರ ಆಕೆಯಲ್ಲಿರಲಿಲ್ಲ. ಮನಸ್ಸೆಲ್ಲ ಊರಿನ ಮೇಲಿತ್ತು. ಅದರ ಕಾರಣ ಮುಂದೆ ಗೊತ್ತಾಗುವುದು, ಅಂತೂ ಭಾರತಕ್ಕೆ ಹಿಂದಿರುಗುವುದೆಂದೂ, ಓದನ್ನು ಮುಂದುವರಿಸುವುದಿಲ್ಲ ವೆಂದೂ ನಿರ್ಧರಿಸಿದಳು.

ಮೂರು ವರ್ಷಗಳ ಕಾಲ ಸರೋಜಿನಿ ಇಂಗ್ಲೆಂಡಿನಲ್ಲಿದ್ದಾಗ ಆಕೆಗೆ ಅನೇಕ ವ್ಯಕ್ತಿಗಳ ಸರಿಚಯವಾಯಿತು. ಲಂಡನ್ಸಿನಲ್ಲಿದ್ದಾಗ ಎಡ್ಮಂಡ್‌ ಗಾಸೆಯವರ ಪರಿಚಯವಾಯಿತಪ್ಪೆ. ಒಂದು ಸಲ ಪರಿಚಯವಾಯಿತೋ ಇಲ್ಲವೋ ಅದು ದಿನೇ ದಿನೇ ಬೆಳೆದು ಬಂದಿತು. ವಿಮರ್ಶಕರ ಮನೆಗೆ ಸರೋಜಿನಿ ಆಗಾಗ್ಗೆ ಹೋಗಿಬರುತ್ತಿದ್ದಳು- ಕೊನೆಗೆ ಆಕೆ ಅವರ ಅಚ್ಚು ಮೆಚ್ಚಿನ ಅತಿಥಿಯಂತಾದಳು. ಆಕೆ ಬಂದರೆ ಅವರಿಗೆ ಬಹು ಆದರ, ಸಂತೋಷ ಹಾಗೂ ಆತ್ಮೀಯತೆ. ಅವಳು ಕವಿತೆಗಳನ್ನು ರಚಿಸುತ್ತಿದ್ದಾ ಳೆಂದು ಗಾಸೆಯವರಿಗೆ ಆಗಲೇ ಗೊತ್ತಾಗಿತ್ತು. ಒಂದು ದಿನ ಅನರು ತಮ್ಮ ಮನಸ್ಸಿನಲ್ಲಿಯೇ ಮಥಿಸುತ್ತಿದ್ದ ವಿಷಯವನ್ನು ಕೇಳಿದರು. ಸರೋಜಿನಿಯು ಬರೆದಿದ್ದ ಕವಿತೆಗಳನ್ನು ನೋಡಬೇಕೆಂದು ಅಪೇಕ್ಷೆ ಸಟ್ಟಿರು. ಸಕೋಜಿನಿ

೨೦ ಸರೋಜಿನಸಿದೇಸಿ

ಇಲ್ಲ ಎಂದು ಹೇಳಲು ಸಾಧ್ಯ ವಾಗಲಿ. ಇದಾದ ಸ್ವಲ್ಪ ದಿನಗಳ ನಂತರ ಸರೋಜಿನಿ ತಾನು ಬರೆದಿದೆ. ಫವಿತೆಗಳ ದೊಡ್ಡ ಗಂಟಿನೆ NK: ಗಾಸೆಯೆನರ

ಕೆ, ಯಲ್ಲಿ, ಛು. ಚಿಕ್ಕವಯಸ್ಸಿನ ಸರೋಜಿನಿ "ತನಗೆ ತೀರ ಹೊಸದಾದ ಜಿಂಗ್ಲಿಷ್‌ ಭಾಷೆಯಲ್ಲಿ ಕವನಗಳನ್ನು ಬರೆಯುವ. ಸಾಹಸ ಮಾಡಿದಳು. ಗಾಸೆಯವರು ಗಂಟನ್ನು ಬಿಚ್ಚಿ ಹಾಳೆಗಳನ್ನು ತಿರುವಿ ಹಾಕಿದರು. ಅವರಿಗೆ ಅದ ನಿರಾಕೆ ಅಷ್ಟಿಷ್ಟಲ್ಲ ಬಾ! ಬಂದದ್ದೆ ನ್ನು ಹೇಳಬೇಕೋ ಬೇಡವೋ ಎಂಬ “ಗ್ಗೆ ಕ್ಸ (ಡಾದ ಅವರು ವೆ ನಸಿನ್ಲದ್ದು ದನ್ನು ಹೇಳು ವುದೇ ಸರಿಯೆಂದು ನಿರ್ಧರಿಸ ಬಾಯಿ ಬಿಟ್ಟಿ ರು. ಅವರು ಏನು ಹೇಳಿದರೆಂಬು ದನ್ನು ಅವರ ಮಾತಿನಲ್ಲಿಯೇ ಕೇಳಿ:

ಕೃತಕವಾದ ಶೈಲಿಯಲ್ಲಿ ಬರೆದಿರುವ ಕವನಗಳ ಇಡೀ ಕಟ್ಟನ್ನೇ ಕಸದ ಬುಟ್ಟಿ ಗೆ ಹಾಕೆಂದು ನಾನು ಬುದ್ಧಿ ವಾದ ಹೇಳಿದೆ. * ನೀನು ಬಹು ಸೂಕ್ಷ್ಮ ತಿ; ಪಾಸ್ಟಾತ್ಯರ ಭಾಷೆಯನ್ನಸ್ಟೆ ಅಲ್ಲದೆ ಅವರ ಛಂದಶ್ಶಾಸ್ತ್ರ ನನ್ನೂ ಆಜಾ ಟೀ ಆದರೆ ಇತ ಹಾರೈಸಿದ್ದ ಅಂಗ್ಲೇಯ ಭಾವಸೆಗಳನ್ನೆ ( ಆಂಗ್ಲೇಯ ಆವರಣದಲ್ಲಿ ಬಿಸಿ ಮಾಡಿ ಬಡಿಸುವುದನ್ನಲ್ಲ ನಾವು ಹಾ ರೈಸಿದ್ದು, ಇಂಡಿಯಾ ದೇಶದ ಹ್‌ ದಯದರ್ಶನವನ್ನು, ಅಲ್ಲಿಯ ನೂಲ ಭಾವನೆಗಳ ನೈಜ ವಿಕ್ಲೇಷಣವನ್ನು, ಮತದ ತತ್ತ ಗಳನ್ನು, ಕನಗೊಂದು ಆತ್ಮವಿದೆಯೆಂದು ಸಾಕ್ಟಾತ್ಯವು ಕನಸು ಕಾಣುವ ಡನೇ ಸೌರ್ವಾತ್ಯದ ಆತ್ಮನನ್ನು ಉಜ್ಜಲಗೊಳಿಸಿದ ನಿಗೂಢ ಸಂದೇಶಗಳನ್ನು. ನಮ್ಮ ನಾಡಿನಲ್ಲಿ ಕಾಣುವ ರಾಬೆನ್‌ ಮಕ್ಕು ಸೈ ಲಾರ್ಕ್‌ ಹಕ್ಕಿಗಳ ಮೇಲೆ ಕವನ ಬರೆಯುವುದನ್ನು ನಿಲ್ಲಿಸಿ, ನಿನ್ನ ನಾಡಿನ ಹೆಣ್ಣು ಹೂ ಮರಗಿಡ ಬಳ್ಳಿಗಳ ಬಗ್ಗೆ ಬರೆ. ನಿನ್ನ ಕನನಕೇಂದ್ರ ಸರ್ವಕ ಕಾನನಗಳಲ್ಲಿ, ಹೊಡೋಟಿಗಳಲ್ಲಿ, ದೇವರ ಗುಡಿಗಳಲ್ಲಾ ಗಲಿ. ನಿನ್ನ ಹುಟ್ಟು ನಾಡಿನ, ಜನರ ಬಗ್ಗೆ ಕವನಗಳನ್ನು ಕಟ್ಟು. ಒಟ್ಟಿನಲ್ಲಿ ಭಾರತದ ನಿಜವಾದ ಕೋಗಿಲೆ ಯಾಗು, ಉತ್ಕೃಷ್ಟ ಇಂಗ್ಲಿಷ್‌ ಸಾಹಿತ್ಯದ ಅರಗಿಳಿಯಾಗಬೇಡ.?

ಗಾಸೆಯವರ ಸಲಹೆ ಸದುದ್ದೇಶ ಪೂರ್ವಕವಾಗಿತ್ತು. ಅದನ್ನು ಪಾಲಿಸುವುದು ಸೂಕ್ತವೆಂದು ಸರೋಜಿನಿ ಭಾವಿಸಿದಳು.

ಲಂಡನ್ಸಿನಲ್ಲಿದ್ದಾಗ ಸರೋಜಿನಿಗೆ ಎಡ್ಮಂಡ್‌ ಗಾಸೆಯವರೆ ಪರಿಚಯ ನಾದಂತೆ ಕೇಂಬ್ರಿಡ್‌ ನಲ್ಲಿದ್ದಾಗ ಆರ್ಥರ್‌ ಸೈಮನ್ನರ ಸರಿಚಯವಾಯಿತು.

ನಿದೇಶಗಮನ ೨೧

ಸೈಮನ್ನ ರು ಗಾಸೆಯವರಂತೆ ಕವಿಗಳೂ ಆಗಿದ್ದ ರ್ಕ, ವಿಮರ್ಶಕರೂ ಆಗಿ ರು. ಇಬ್ಬರು ಮಹನೀಯರ ಸಂಸ ಸರ್ಕ. ಸರೋಜಿನಿಯ ಹೃದಯ ದಲ್ಲಿ ಎಂತಹ ಉತ್ಕೃಷ್ಟ ಕವಿತೆಗಳ ಸೃಷ್ಟಿಗೆ ನಾಂದಿಯಾಯಿತೆಂಬುದನ್ನು ಮುಂದೆ ನೋಡಬಹುದು.

ಹೀಗೆ ಮೂರು ವರ್ಷಗಳ ಕಾಲ ಹತ್ಕೊಂಬತ್ತನೇ ಶತಮಾನದ ಪಾಶ್ಚಾತ್ಯ ಸಂಸ್ಕೃತಿಯ ಸವಿಯುಂಡು ಇಪ್ಪತ್ತನೇ ಶತಮಾನದ ಉದಯಕಾಲ ದಲ್ಲಿ ಸರೋಜಿನಿ ಮಾತೃಭೂಮಿಯ ಕಡೆ ಪ್ರಯಾಣಹೊರಟಿಳು. ಮನ ಸಲ್ಲ ಮಾತೃಭೂಮಿಯ ದರ್ಶನಕ್ಕಾಗಿ ಹಾತೊರೆಯುತ್ತಿತ್ತು. ಯುಗಾ ಚಾರ್ಯ ಸ್ವಾಮಿ ವಿವೇಕಾನಂದರು ಅಮೆರಿಕಾ ಇಂಗೆ ೦ಡ್‌ ದೇಶಗಳನ್ನು ಸುತ್ತಿ ಭಾರತಕ್ಕೆ ಹಿಂದಿರುಗಲು ಹೊರಭಾಗ ಸ್ನೇಹಿತನೆ ನೊಬ್ಬನು ಅವರನ್ನು ಕೇಳಿದನಂತೆ ಸಾ ಿಮಿಜಿ, ನಾಲ್ಬು ನರ್ಷಗಳ ಕಾಲ ಪಶ್ಚಿಮ ದೇಶದ ಭೋಗಭೂಮಿಯಲ್ಲಿ ವಾಸಿಸಿದ ನಿಮಗೆ ಭಾರತ ವರ್ಷವು ಈಗ ಹೇಗೆ ಕಾಣುತ್ತದೆ?” ಎಂದು. ಅದಕ್ಕೆ ಸ್ವಾಮಿಗಳು ರೀತಿ ಉತ್ತರಿಸಿದರಂತೆ : ನಾನಿಲ್ಲಿಗೆ ಬರುವುದಕ್ಕೆ ಮೊದಲು ಭಾರತ ಭೂಮಿಯನ್ನು ಪ್ರೀತಿಸುತ್ತಿ ದ್ದೆ. ಈಗಲಾದರೋ ಪುಣ್ಯ ಮಾತೃ ಭೂಮಿಯ ಮಣ್ಣಿನ Wek ಕೂಡ ನನಗೆ ಪವಿತ್ರತಮವಾಗಿದೆ ; ಬೀಸುವ ಗಾಳಿಯು ಜಸ ಈಗ ನನಗದು ನಿಜವಾದ ಪುಣ್ಯ ಭೂಮಿಯಾಗಿದೆ, ಯಾತ್ರಾಸ್ಥಾ ನವಾಗಿದೆ; ತೀರ್ಥ ಕೆ ಶ್ಸೇತ್ರ ವಾಗಿದೆ.”

ಹಾ ಜತರ ಬ್ರಹ್ಮಚಾರಿಯಾಗಬೇಕಂದು ನಿರ್ಧರಿಸಿದ್ದ ಯೋಗಿಯ ಮಾತುಗಳು, ಆದರೆ ಜೀವನವನ್ನು ಭೋಗದಲ್ಲಿ ಕಳೆಯ ಬೇಕೆಂದು ನಿರ್ಧರಿಸಿದ್ದ ಹತ್ತೊಂಬತ್ತು ವರ್ಷದ ಅವಿವಾಹಿತ ಯುವತಿಗೆ ಭಾರತ್ತ ಮತ್ತಷ್ಟು ಪವಿತ್ರವಾಗಿ ಕಂಡಿರಬೇಕು. ಅದರಲ್ಲಿಯೂ ಆಕಯ ಹೃದಯದಲ್ಲಿ ಪ್ರೇಮವಂಕುರಿಸಿ ಬಳ್ಳಿಯಾಗತೊಡಗಿರುವಾಗ ಬಳ್ಳಿ ಗಾಶ್ರಯವಾಗಲು ಸಿದ್ಧವಾಗಿರುವ ಪ್ರಿಯನೊಬ್ಬನು ಭಾರತದಲ್ಲಿರುವಾಗ ಭಾರತ ನೂರ್ಮಡಿ ಸವಿತ್ರವಾಗಿರಬೇಕು!

ಬೊಂಬಾಯಿಯಲ್ಲಿ ಹಡಗು ಇಳಿದ ಸರೋಜಿನಿ ಹೈದರಾಬಾದಿಗೆ ಧಾವಿಸಿದಳು. ಮಗಳ ಕೀರ್ತಿಯನ್ನು ದೂರದಿಂದಲೇ ಕೇಳಿ ಸಂತೋಷ ಗೊಂಡಿದ್ದ ತಂದೆತಾಯಿಗಳು ಮಗಳನ್ನು ತೋಳೆರೆದು ಆಲಿಂಗಿಸಿ ಮುಂಡಾಡಿ

೨೨ ಸರೋಜಿನಿದೇವಿ

ದರು. ಮಗಳು ಕೇವಲ ಕವಯಿತ್ರಿಯೇ ಅಲ್ಲದೆ ಒಳ್ಳೆಯ ಭಾಷಣಕಾರಳೂ ಎಂಬ ಕೇರ್ತಿ ಸಂಪಾದಿಸಿದ್ದಳು, ಆರು ಸಾವಿರ ಮೈಲಿಗಳಾಚೆಯಿಂದ ಬರುತ್ತಿ ದ್ದ ಮಗಳ ಹೆಗ್ಗ ಳಿಕೆಯನ್ನು ಕೇಳಿ ತಂದೆ ತಾಯಿಗಳು ಆನಂದ ಪಟ್ಟಿದ್ದ ರು. ಅಲ್ಲಿಂದ ಬರುತ್ತಿದ್ದ ಪ್ರತಿ ಪತ್ರದಲ್ಲಿಯೂ ಪ್ರಶಂಸೆ ಸೆಯ ಮಾತುಗಳೇ ತುಂಬಿದ್ದು ವು. ಓಡೆವುವನ್ನು ಮುಂದುನರಿಸಲಾರದುದಕ್ಕೆ ಅವರೇನೂ ಥೆನಡಲಿಲ್ಲ. ನಿಭನಾದ ಓದು po ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಒಲ್ಲದ ಗಂಟಲಿನಲ್ಲಿ ಕಡುಬು ತುರುಕುವುದು ಸರಿ ಯಲ್ಲವೆಂಬುದನ್ನು ನಿದ್ಯಾಭ್ಯಾಸದಲ್ಲಿ ಸರಿಣತರಾದ ಅಘೋರನಾಥ ಚಟ್ಟೋಪಾಧ್ಯಾಯರಿಗೆ ಹೇಳಿಕೊಡಬೇಕಾಗಿರಲಿಲ್ಲ. ವಾಸ್ತವವಾಗಿ ಮಗಳು ಗಳಿಸಿಕೊಂಡಿದ್ದುದು ನಿಶ್ಚವಿದ್ಯಾನಿಲಯದ ಪದವಿಗಿಂತ ಮೇಲೆಂದು ಮಾತಾಸಿಶ್ಚಗಳು ಭಾವಿಸಿದರು. ಪುಸ್ತಕದಿಂದ ಕಲಿಯುವುದಕ್ಕಿಂತ ಪ್ರಪಂಚದಿಂದ ಕಲಿಯುವುದು ಹೆಚ್ಚು, ಅದನ್ನು ಮಗಳು ಕಲಿತಿದ್ದಾ ಳೆಂದು ಹಿಗ್ಗಿದರು. ವಿದೇಶದಿಂದ ಹಿಂದಿರುಗಿದ ಸರೋಜಿನಿ ಮಾತಾನಿತೃಗಳ ಮನುತೆಯ ಮಗಳಾದಳು.

೫. ಶ್ರೀಮತಿ ನಾಯಿಡು

ವಿದೇಶಕ್ಕೆ ಹೋಗುವ ಮುನ್ನವೇ ಸರೋಜಿನಿಯ ಹೈದಯ ಮಂದಿರ ದಲ್ಲಿ ಪ್ರೇಮಾರಾಧನೆ ನಡೆದಿತ್ತು. ಶ್ರೀಮಂತರೂ ಗೌರವ ಮನೆತನದವರೂ ಆದ ಒಂದು ಸಂಸಾರ ಹೈದರಾಬಾದಿನಲ್ಲಿತ್ತು. ಸಂಸಾರದ ಕಣ್ಮಣಿಯಂತೆ ಗೋವಿಂದರಾಜುಲು ನಾಯಿಡು ಎಂಬ ಸುಶಿಕ್ಷಿತ ಯುವಕನಿದ್ದ. ಸಕಲ ರಿಗೂ ಆಶ್ರ ಯದಾತರಾಗಿದ್ದ ಅಘೋರನಾಥರ ಮನೆಗೆ Risso ಬರುವುದಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಮನೆಗೆ ಬಂದ ಯುವಕ ನನ್ನು ಸಕೋಜಿಸಿ ನೋಡುವುದಕ್ಕೂ ಯಾವ ಅಡ್ಡಿ ಇರಲಿಲ್ಲ. ನಾಲ್ಕಾರು ಸಲ ನೋಡಿದ ಯುವಕ ಯುವತಿಯರು ಒಬ ರನ್ನೊಬ್ಬರು ಮೆಚ್ಚ ದರು. ಇಂತಹ ವಿಚಾರಗಳಲ್ಲಿ ಯಾವ ಮಾತಾಪಿತೃಗಳೇ ಆಗಲಿ ಸೂಕ್ಷ್ಮ ಮತಿಗಳಾಗಿರುತ್ತಾರೆ. ಅಂತಹುದರಲ್ಲಿ ಅಘೋರನಾಥ ವರದಸುಂದರಿ ದೇವಿಯರಿಗೆ ಮಗಳ ಮನಸ್ಸು ತಿಳಿಯದೇ ಹೋಗಲಿಲ್ಲ. ಹುಡುಗನಾಗಿ ದ್ದಾ ಗಲೇ ಜನಿವಾರ ಕಿತ್ತೆ ನದ ಅಘೋರನಾಥರು ಪೆ ಶ್ರಮಕ್ಕೆ ಅಡ್ಡಿ ಬರುವ ವರಾಗಿರಲಿಲ್ಲ. ಆದಿ ಸಮಾಜದ ಆಕೆ ನೀಪಣೆಸೆ ಯೆನೇಚಿಸಬೇಕಾಗ ಬಂತು. ಸರೋಜಿನಿ ಬ್ರಾಹ್ಮಣ ವಾನೆತನದವಕೆಂದು ಜನರಿಗೆ ಗೊತ್ತಿತ್ತು. ಗೋವಿಂದರಾಜು ಶೂದ್ರಮನೆತನದವನೆಂಬುದು ಎಲ್ಲರಿಗೂ ತಿಳಿದ ವಿಷಯ ವಾಗಿತ್ತು. ಸರೋಜಿನಿಯ ಮನೆಯಲ್ಲಿ ಬ್ರಾಹ್ಮಣರ ಆಚಾರ ವ್ಯವಹಾರ ಗಳಾವುವೂ ಇರಲಿಲ್ಲ. ಆದರೆ ದೊಡ್ಡವರನ್ನು ತಮ್ಮ ಜಾತಿಯವರೆಂದು ಹೇಳಿಕೊಂಡು ಹೆಮ್ಮೆ ಸಡುವ ಸಮಾಜ ಅವರನ್ನು, ಅಸ ದ್ರ ಬ್ರಾಹ್ಮಣ ಕೆಂದು ಕೊಂಡಾಡುತ್ತಿ ತು. ಅತ್ತ ಸಂಸ್ಕೃತಿಯಲ್ಲಿ ಕಡಮೆಯನ್ಬದ ಗೊವಿಂದ ರಾಜು ಮನೆತನವನ್ನು ಶೂದ್ರತ್ವದ ಶೂಲಕ್ಕೇರಿಸದೆ. ಸಮಾಧಾನ ಗೊಳ್ಳುತ್ತಿರಲಿಲ್ಲ. ಸಮಾಜದ ಅಪವಾದವನ್ನು ಮಾರಿ ನಡೆಯುವುದು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸುಲಭವಾಗಿ ಕಾಣಬಹುದು. ಆದರೆ ಇದು ಅರುವತ್ತು ವರ್ಷಗಳ ಹಿಂದಿನ ಮಾತು. ಸಮಾಜದ ಕಟ್ಟು ಪಾಡುಗಳು ಆಗಿನ್ನೂ ಭದ್ರವಾಗಿದ್ದುವು. ಮುಂದುವರಿದವರಲ್ಲಿ ಎಷ್ಟು

ಕಟ್ಟು ಕಟ್ಟಿಳೆಗಳಿದ್ದುವೋ ಅದಕ್ಕಿಂತ ಹೆಚ್ಚಾದ ಕಟ್ಟು ಕಟ್ಟಳೆಗಳು

೨೪ ಸರೋಜಿನಿದೇನಿ

ಹಿಂದುಳಿದವರಲ್ಲಿದ್ದು ವು, ಬ್ರಾಹ್ಮಣನ ಮನೆಗೆ ಹೊರೆಯ ಹೋದರೆ ಆಗುವ ಅಸವಿತ್ರತೆಗಿಂತ ಹೆಚ್ಚಾಗಿ ಹೊಲೆಯನ ಮನೆಗೆ ಬ್ರಾಹ್ಮಣ ಬಂದರೆ ಆಗುವ ಅನಾಹುತ ಹೆಚ್ಚೆಂದು ಭಾವಿಸಲ್ಪಟ್ಟಿ ತ್ತು.

ಗೋವಿಂದರಾಜುವನ್ನು ಮದುವೆಯಾಗುವುದೇ ಕೂಡದೆಂದು ಹೇಳಿ ಮಗಳ ಮನಸ್ಸನ್ನು ಮುರಿಯುವುದು ಅಘೋರನಾಥರಿಗಾಗಲೀ ವರದ ಸುಂದರಿಷೇನಿಗಾಗಲೀ ಸರಿಯಾಗಿ ಕಾಣಲಿಲ್ಲ. ಸಂಬಂಧನನ್ನು ತಪ್ಪಿಸು ವುದಾದರೆ ರೀತಿ ತಪ್ಪಿಸುವುದು ಅವರಿಗೆ ಒಪ್ಪಲಿಲ್ಲ. ನೈಜಾಮರು ನಿಲಾ ಯತಿಗೆ ಹೋಗಲು ಸರೋಜಿನಿಗೆ ಒಂದು ಸ್ಫಾಲರ್‌ಹಿಸ್‌ ಕೊಟ್ಟಿ ರಪ್ಟೆ, ಒಂದು ವಿಧದಲ್ಲಿ ಇದು ಅಘೋರನಾಥರಿಗೆ ಸಹಾಯಕವಾಯಿತು. ಮಗಳು ದೂರ ಹೋದರೆ ಪ್ರೇಮ ಬದಲಾಯಿಸಿದರೂ ಬದಲಾಯಿಸಬಹುದೆಂದು ಅವರು ಆಲೋಚಿಸಿರಬೇಕು. ಅಥವಾ ಪ್ರಥಮಸಪ್ರೇಮ ಎಷ್ಟು, ದಿನ ಸ್ಹಿರ ವಾಗಿ ನಿಂತೀತೆಂದು ನೋಡೋಣವೆಂದು ಭಾವಿಸಿರಬೇಕು. ಆದರೆ ಬದ- ಲಾವಣೆ ನೈಜಸ್ರೇಮಕ್ಕೆ ಹೊರತು. ಮೂರು ವರ್ಷಗಳು ಉರುಳಿದರೂ ಸರೋಜಿನಿ ಗೋವಿಂದರಾಜುಲು ಅವರ ಪ್ರೇಮ ಕುಗ್ಗ ಲಿಲ್ಲ. ಅದರ ಬದಲು ಮತ್ತಷ್ಟು ಪುಟಿಗೊಂಡಿತು. ಗೋವಿಂದರಾಜುಲು ಆಗ ಕೇಂಬ್ರಿಡ್ಡಿಗೆ ಹೋಗಿದ್ದರು. ಅಲ್ಲಿ ಅವರು ಸರೋಜಿನಿಯನ್ನು ನೋಡುತ್ತಿದ್ದರೆಂದೂ ಅವರಿಬ್ಬರ ಪ್ರೇಮ ಸ್ಥಿರವಾಗಿ ಬೇರೌರಿತೆಂದೂ ಹೇಳುತ್ತಾರೆ. ಅಂತೂ ಸಸ್ಮಸಾಗರಗಳು ಅಡ್ಡ ಬಂದರೂ ಅವರಿಬ್ಬರ ಪ್ರೇಮ ಚಲಿಸುವಂತಿರಲಿಲ್ಲ. ಅಚಲಪ್ರೇಮ ಎಂದೂ ಅಚಲನವೇ. ಅದು ಹೆಚ್ಚಾಗಿ ಮಾನಸಿಕ ಪ್ರೇಮ, ವಿವಾಹ ಕೇವಲ ದೈಹಿಕ ಸಂಬಂಧವಷ್ಟೇ ಅಲ್ಲ, ಮಾನಸಿಕ ಮಿಲನವೂ ಹೌದು. ದೈಹಿಕ ಸಂಬಂಧ ಮಾನಸಿಕಮಿಲನಕ್ಕೆ ದಾರಿ ಅಷ್ಟೆ,

ಪರದೇಶದಿಂದ ಹಿಂದಿರುಗಿದ ಸರೋಜಿನಿ ತನ್ನ ಪ್ರೇಮವನ್ನು ಕಿಂಚಿತ್ತೂ ಬದಲಿಸಿರಲಿಲ್ಲ. ಅಂತೆಯೇ ನಾಯಿಡು ಅವರೂ ತಮ್ಮ ನಿರ್ಧಾರವನ್ನು ಚಲಿಸಿರಲಿಲ್ಲ. ಮೂರು ವರ್ಷಗಳ ಅವಧಿ ಅವರ ಪ್ರೇಮಕ್ಕೆ ಮತ್ತಷ್ಟು ಪುಟ ಹಾಕಿದಂತಾಗಿತ್ತು. ಈಗಂತೂ ಅವರಿಗೆ ಮನದಟ್ಟಾ ಯಿತು « ಅವರ ಪ್ರೇಮ ಅಮರವಾದುದು, ಜಾತಿ ಮತ ಭೇದಗಳನ್ನು ಮೀರಿದ್ದು ಎಂದು. ಸರೋಜಿವಿಯ ಆರೋಗ್ಯವೂ ಅಷ್ಟು ಚೆನ್ನಾಗಿಲ್ಲದು ದನ್ನು ಕಂಡ ಅವರು ನಿರಾಶೆಯಿಂದೇನಾದರೂ ಮಗಳ ಮನೋವ್ಯಥುಗೆ

ಶ್ರೀಮತಿ ನಾಯಿಡು ೨೫೪

ಕಾರಣವಿರಬಹುದೇ ಎಂದು ಆಲೋಚಿಸಿದರು. ಮಗಳಿಗೆ ತಕ್ಕ ವರನಿ ದ್ದಾ ನೆ ಗೋವಿಂದರಾಜುಲು. ಅವರ ತಂದೆ ಹೆಸರಾಂತ ಮಿಲಿಟರಿ ಡಾಕ್ಸ್‌, ಮಗನೂ ವ್ಸ ದ್ಯ ಶಾಸ್ತ್ರ ದಲ್ಲಿ ವಿದೇಶೀಯ ಉನ್ನ ಪದವಿಗಳನ್ನು ಸಡೆದಿ ದನು. ಜಾತಃ ಜಾಂ ಸರ್ಕಾರದಲ್ಲಿ ಉನ್ನತ ಸೃದ್ಯಾಧಿ ಬಾ ಹುದ್ದೆ ಯಲ್ಲಿದ ನು. ನುಡಿಯಲ್ಲಿ ಸ್ವಚ್ಛ ನೆಂಟು ವರ್ಷದ ವಯಸ್ಸಿನಲ್ಲಿ ಬಹುಚಿಕ್ಕ ಹುಡುಗಿಯೊಬ್ಬಳನ್ನು pin ದ್ದನು. ಆದರೆ ಹುಡುಗಿ ಒಂದು ವರ್ಷದೊಳಗೇ ತೀರಿಕೊಂಡಿದ್ದಳು. ಅನಂತರ ವಿದೇಶಕ್ಕೆ ಹೋಗಿ ವೈದ್ಯಶಾಸ್ತ್ರ ದಲ್ಲಿ ಪದವಿಗ ಳನ್ನು ಪಡೆದು ಬಂದಿದ್ದನು. ಹೈದರಾಬಾದಿನ ಟ್‌ ಸಮಾಜದಲ್ಲಿ ಎಲರ ಪ್ರಿ ತ್ರಿ ಗೌರವಗಳಿಗೂ ಪಾತ್ರನಾಗಿದ್ದ ನು. ವೆ ದ್ಯವೃತ್ತಿ ಶಿ.ಯಲ್ಲಿ ಅತನಿಗಿದ್ದ ಸುಪಾ ದನೆ ಯಾರಿಗಾದರೂ ಹೊಟ್ಟ ಕೆಚ್ಚು ಪಡಿಸುವಷಿ ಸತ್ತು, ಹೀಗಿರುವಾಗ ತಂದೆತಾಯಿಗಳು Seat ನಿಶ್ಶಯಮಾಡಿಬಿಟ್ಟಿರು. ಜಾತಿಮತದ ಕಟ್ಟುಕಟ್ಟಳೆಗಳೆಲ್ಲ ಕಿತ್ತುಹೋದುವು; ಪ್ರಾಂತಭೇದಗಳೆಲ್ಲ ನಿರ್ಮೂಲವಾದುವು. ವೆ ) ಭವದಿಂದ ವಿವಾಹ ಜರುಗಿತು. ತುಂಬಿ ತುಳು ಕಾಡುತ್ತಿ ದ್ದ ಎರಡು ನೆ ಸ್ರ ಓಕ ಸರೋವರಗಳು ಅಡ್ಡಿ ಆತಂಕಗಳ ಕಟ್ಟಿ ಯನ್ನು ಒಡೆದುಕೊಂಡು ಹರಿಯಕೊಡಗಿದುವು. ಬಸು ಹಟ ಬಂದ ಮೂರೇ ತಿಂಗಳಿನಲ್ಲಿ ಅಂದರೆ ೧೮೯೮ನೇ ಡಿಸೆಂಬರ್‌ ತಿಂಗಳಿನಲಿ ಎರ ದಕ ಸರೋಜಿನಿ ಶ್ರೀಮತಿ ಸರೋಜಿನಿ ನಾಯಿಡು ಆದರು. ಇಡೀ ದೇಶವೇ ವಿವಾಹವನ್ನು ಹರಸುವ ಬದಲು, ತೆಗಳಿರಬೇಕು. ಮಡಿವಂತ ಜನ ತಮ್ಮ ಜಾತಿಯ ಮೈಲಿಗೆಯಾಯಿತೆಂದು ಕ್ರೋಧಗೊಂಡಿರಬೇಕು. ಆದರೆ ಶ್ರೀಮತಿ ಸರೋಜನಿ ನಾಯಿಡು ಶ್ರೀಮತಿ ನಾಯಿಡು ಆಗಿಯೇ ಉಳಿದರು. ಮದುವೆಯಾದನಂತರ ಶ್ರೀಮತಿ ಸರೋಜಿನಿ ನಾಯಿಡು ಗಂಡನ ಮನೆಗೆ ಹೋದರು. ಮುದ್ದು ಹೆಂಡತಿಯೊಡನೆ ತಮ್ಮ ಚಂದದ ಮನೆಯಲ್ಲಿ ಸಂಸಾರ ಮಾಡಬೇಕೆಂದು ಗೋವಿಂದರಾಜುಲುಗೆ ಅನ್ನಿಸಿದ್ದು ಸ್ವಾಭಾ ವಿಕವೇ. ತಂದೆ ತಾಯಿಯರು ಮಗಳನ್ನು ಹರಸಿ ಕಳುಹಿಸಿಕೊಟ್ಟರು. ಬೇರೆ ಊರಿಗೆ ಹೋಗದೆ ಒಂದೇ ಊರಿನಲ್ಲಿದ್ದು ದರಿಂದ ತಂದೆ ತಾಯಿಗಳಿಗೆ ಅಪ್ಪನೂ ಅಗಲಿಕೆ ಕಾಣಲಿಲ್ಲ. ಆದರೂ ಕೋಗಿಲೆಯ ಮರಿ ಒಂದು ಗೂಡಿನಿಂದ ಹಾರಿ ಮತ್ತೊಂದರ ಆಶ್ರಯ ಪಡೆಯಿತು.

೨೬ ಸಕೋಜಿನಿದೇಪಿ

ಹೊಸ ಸಂಸಾರ ಬಹು ಆನಂದದಿಂದ ಸಾಗಿತು. ಮನೆಯಲ್ಲಿ ಎತ್ತ ತಿರುಗಿದರತ್ತ ಪ್ರೀತಿಪುರಸ್ಪಾರಗಳ ಹೊಳೆಯೇ ಹೆರಿಯುತ್ತಿ ತ್ತು. ಡಾ. ಗೋವಿಂದರಾಜುಲು ನಾಯಿಡು ಪ್ರಿಯ ಮಡದಿಯ ಸಹವಾಸ ದಲ್ಲಿ, ಆಕೆಯ ಕಾವ್ಯಗಾನದ ಇಂಪಿನಲ್ಲಿ ಕಾಲ ಕಳೆದರು. ತಮ್ಮ ರಸಮಯ ಸಂಸಾರ ವನ್ನು ಶ್ರೀಮತಿ ಸರೋಜಿನಿ ನಾಯಿಡು ಅವರೇ ೧೯೦೪ ರಲ್ಲಿ ಇಂಗ್ಲೆಂಡಿನ ತಮ್ಮ ಹಳೆಯ ಗೆಳೆಯರಾದ ಆರ್ಥರ್‌ ಸೈಮನ್ನರಿಗೆ ಬರೆದ ಕಾಗದ ವೊಂದರಲ್ಲಿ ಹೀಗೆ ವರ್ಣಿಸಿದ್ದಾರೆ

“ಬಹು ಸುಂದರವಾದ ಕನನಗಳು ಗಾಳಿಯಲ್ಲಿ ಹಾರಾಡುತ್ತಿರುವುದು ನಿಮಗೆ ಗೊತ್ತಿರಲಾರದು. ದೇವರ ದಯೆಯಿದ್ದರೆ ವರ್ಷ ನನ್ನ ಆತ್ಮದ ಬಲೆಯನ್ನು ಬೀಸಿ ಅವುಗಳನ್ನೆಲ್ಲ ಹಿಡಿಯುತ್ತೇನೆ. ದೇವರ ದಯೆಯಿದ್ದರೆ ನನಗೊಂದಿಷ್ಟು ಆರೋಗ್ಯಭಾಗ್ಯವನ್ನು ದಯಪಾಲಿಸೆಂದು ಬೇಡುತ್ತೇನೆ. ಒಂದಿಷ್ಟು ಆರೋಗ್ಯವಿದ್ದರೆ ಸಾಕು ನನ್ನ ಜೀವನ ಪರಿಪೂರ್ಣವಾಗುತ್ತದೆ. ಏಕೆಂದರೆ ಷೆಲ್ಸಿಯು ಹೇಳುವ " ಆನಂದದ ಅಪ್ಪರೆಯೇ' ಇಲ್ಲಿ, ನನ್ನ ಪುಟ್ಟ ಮನೆಯಲ್ಲಿ, ವಾಸಮಾಡುತ್ತಿದ್ದಾಳೆ. ತೋಟದಲ್ಲಿರುವ ಹಕ್ಕಿಗಳ ಗಾನದಲ್ಲಿ ನನ್ನ ಮನೆ ಅದ್ದಿ ಹೋಗಿದೆ ; ಪಡಸಾಲೆಯಲ್ಲಿ ಆಡುತ್ತಿರುವ ಮಕ್ಕಳ ಗಲಿಬಿಲಿಯಲ್ಲಿ ನನ್ನ ಮನೆ ತೇಲಿಹೋಗಿದೆ,”

ಅಹುದು. ಆರೋಗ್ಯವೊಂದೇ ಬೇಕಾಗಿದ್ದುದು ಸರೋಜಿನಿಯ ಸಂಸಾರಜೀವನವನ್ನು ಪರಿಪೊರ್ಣಗೊಳಿಸಲು. ಪತಿಗೆ ತನ್ನ ಪತ್ನಿಯ ಮೇಲಿದ್ದ ಪ್ರೇಮ ಅಗಾಧವಾಗಿತ್ತು. ಪತ್ನಿಯೂ ಪತಿಯ ಸಹವಾಸದಲ್ಲಿ ಆತ್ಮದ ಅಗಾಧ ಆಕಾಂಕ್ಸೆಗಳ ಈಡೇರಿಕೆಯನ್ನು ಕಂಡಿದ್ದಳು. ದಂಪತಿಗಳಿಗೆ ಮಕ್ಕಳ ಭಾಗ್ಯವೇನೂ ಕಡಮೆಯಿರಲಿಲ್ಲ. ಅವರಿಗೆ ನಾಲ್ಕು ನಲ್ಮಕ್ಕಳಾದರು. ಎರಡು ಹೆಣ್ಣು, ಎರಡು ಗಂಡು. ಹೆಣು ಮಕ್ಕಳ ಹೆಸರು ಪದ್ಮಜಾ ನುತ್ತು ಲೀಲಾಮಣಿ. ಗಂಡುಮಕ್ಕಳ ಹೆಸ ಸರು ಬಿಯಸೂರ್ಯ ಮತ್ತು ರಂಥ ಮಕ್ಕಳ ಲಾಲನೆ ಪಾಲನೆಯೇ ತಾಯಿಯ ಬಹುಕಾಲವನ್ನು ತೆಗೆದು ಕೊಳು ತ್ತಿತ್ತು. ಬಿಡುವಾದಾಗ ಪುಸ್ತಕಗಳನ್ನು ಓದುವುದು, ಕವನಗಳನ್ನು ರಚಿಸುವುದು ಆಕೆಯ ಪ್ರಿಯವಾದ ಕೆಲಸವಾಗಿತ್ತು. ಆಕೆಯ ಹೃದಯದಲ್ಲಿ ಕವಿ ಹೊರಹೊಮ್ಮ್ಮುತ್ತಿದ್ದ. ಆಕೆ ಕಂಡ ಕನಸುಗಳು ಇನ್ನೂ ಕನಸಾಗಿಯೇ ಉಳಿದಿದ್ದುವು. ಆದರೆ ಕನಸುಗಳು ನನಸಾಗುವ ಮೊದಲೇ ತಾನು

ಶ್ರೀಮತಿ ನಾಯಿಡು ೨೬

ಇಹಬರೋಕದಿಂದೆ ಸರಶೋಕಕ್ಕೆ ಹೋಗಬೇಕಾಗಬಹುದೇನೋ ಎಂಬ ಸಂದೇಹ ಹೃದಯದಲ್ಲಿ ಕೀಟಿದಂತೆ ಕೊರೆಯುತ್ತಿತ್ತು. ಅದಕ್ಟೋಸ್ಫರವೇ ಸರೋಜಿನಿಯವರು " ದೇವರ ದಯೆಯಿದ್ದರೆ ವರ್ಷ ನನ್ನ ಆತ್ಮದ ಬಲೆ ಯನ್ನು ಬೀಸಿ ಅವುಗಳನ್ನೆಲ್ಲ ಹಿಡಿಯುತ್ತೇನೆ. ದೇವರ ದಯೆಯಿದ್ದರೆ ನನಗೊಂದಿಷ್ಟು ಆರೋಗ್ಯಭಾಗ್ಯವನ್ನು ದಯಸಾಲಿಸೆಂದು ಬೇಡುತ್ತೇಸೆ' ಎಂದು ದೇವರಲ್ಲಿ ಮೊರೆಯಿಟ್ಟಿದ್ದು.

ಆರೋಗ್ಯ ಸರಿಯಿಲ್ಲದಿದ್ದರೂ ಅವರು ದಿಟ್ಟಿ ತನದಿಂದ ಮುನ್ನುಗ್ಗಿ ದರು ದೇಹ ಸೂಕ್ಷ್ಮನಾಗಿದ್ದರೂ, ಆರೋಗ್ಯ ಹಾಗೂ ಹೀಗೂ ಇದ್ದರೂ ಮನಸ್ಸು ಸ್ಸೈರ್ಯದಿಂಗಿತ್ತು. ಮೂಡಿದ ನಿರ್ಧಾರನನ್ನು ಮುಗಿಸಿಯೇ ತೀರುವೆನೆಂದುಕೊಂಡೆರು.- ಜೊತೆಗೆ ಗಂಡನ ಪ್ರೋತ್ಸಾಹ ಅಪಾರವಾಗಿತ್ತು. ಸರೋಜನರಳಲು ಸೂರ್ಯೋದಯವಾಗಬೇಕಾಗಿತ್ತು. ಸೂರ್ಯೋ ದಯದಂತಿದ್ದರು ಡಾ. ನಾಯಿಡು ಅವರು,

೬. ಸರೋಜವರಳಿತು-ಈಕೋಗಿಲೆ ಹಾಡಿತು

ಈಗ ಸರೋಜವರಳಿ ಎಂತಹ ಕಂಸನ್ನು ಬೀರಿತೆಂಬುದನ್ನು ನೋಡೋಣ. ಅರಗಿಣಿ ಕೋಗಿಲೆಯಾದುದನ್ನು ಕಾಣೋಣ. ಸೌಂದರ್ಯ ವನ್ನು ಅನುಭವಿಸುವ ಇಚ್ಛೆಯೇ ಸರೋಜಿನಿಯನ್ನು ಕವಿಯಾಗಿ ಮಾಡಿದ್ದು. ಸೌಂದರ್ಯದ ಸಂಪರ್ಕವಾಯಿತೆಂದರೆ ಅವರ ನರಗಳು ಆನಂದದಿಂದ ಮಿಡಿಯುತ್ತಿದ್ದುವು. ತಮ್ಮ ಅನುಭವದ ಬಗ್ಗೆ ಅವರು ಆರ್ಥರ್‌ ಸ್ಫಮ ನ್ನ ರಿಗೆ ಕಾಗದದಲ್ಲಿ ಹೀಗೆ ಹೇಳಿದ್ದಾರೆ

6 ನನ್ನ ಪೂರ್ವಿಕರು ಸಾವಿರಾರು ವರ್ಷಗಳಿಂದ ಗಿರಿ ಗಹ್ವರ ಕಾನನ ಗಳನ್ನು ಪ್ರೀತಿಸುತ್ತ ಬಂದಿದ್ದಾರೆ ; ಮಹಾಕನಸುಗಳನ್ನು ಕಂಡಿದ್ದಾರೆ; ಮಹಾವಿದ್ವಾಂಸರಾಗಿದ್ದಾರಿ | ಮಹಾಯೋಗಿಗಳಾಗಿದ್ದಾರೆ. ನನ್ನ ತಂದೆಯೂ ಕನಸು ಕಾಣುನನರೇ. ಮಹಾ ಕನಸುಗಳನ್ನು ಕಂಡೂ ಇದ್ದಾರೆ. ಅವರು ಮಹಾಪುರುಷರು. ಅವರ ಜೀವನ ಉಜ್ವಲ ನಷ್ಟ. (Magnificent failure) ಇಡೀ ಇಂಡಿಯಾದಲ್ಲಿ ಅವರಷ್ಟು ದೊಡ್ಡ ಸೆಂಡಿತರು ಬೇರೊಬ್ಬ ರಿಲ್ಲವೆಂದು ನಾನು ಭಾವಿಸಿದ್ದೇನೆ. ಅವರಷ್ಟು ಪ್ರೀತಿಪಾತ್ರರಾದವರೂ ಬೇರೊಬ್ಬರಿಲ್ಲವೆಂದು ತಿಳಿದಿದ್ದೇನೆ, ಅವರ ನೀಳವಾದ ಬಿಳಿಯ ಗಡ್ಡ, ಹೋಮರನನ್ನು ಹೋಲುವ ಮುಖ ಮತ್ತು ಮನೆಯ ಮೇಲ್ಚಾವಣಿ ಎಲ್ಲಿ ಬಿದ್ದಿತೋ ಎನ್ನುವಷ್ಟು ಗಟ್ಟಿ ಯಾಗಿ